News Karnataka Kannada
Thursday, April 25 2024
Cricket
ಬೆಂಗಳೂರು ನಗರ

ಕುದುರೆ ರೇಸ್ ಗೆ ಅನಧಿಕೃತ ಬೆಟ್ಟಿಂಗ್: ಹತ್ತು ಮಂದಿ ಸೆರೆ

Photo Credit :

ಕುದುರೆ ರೇಸ್ ಗೆ ಅನಧಿಕೃತ ಬೆಟ್ಟಿಂಗ್: ಹತ್ತು ಮಂದಿ ಸೆರೆ

ಬೆಂಗಳೂರು: ರೇಸ್ ಕೋರ್ಸ್ ರಸ್ತೆಯಲ್ಲಿರುವ ಟರ್ಫ್ ಕ್ಲಬ್ ನಲ್ಲಿ ಅಕ್ರಮವಾಗಿ ಕುದುರೆ ರೇಸ್ ಗೆ ಬೆಟ್ಟಿಂಗ್ ನಡೆಸುತ್ತಿದ್ದ ಹತ್ತು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ನಗರದ ಹೈಗ್ರೌಂಡ್ಸ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಿಸಿಬಿ ಪೊಲೀಸರು ದಾಳಿ ಮಾಡಿ ಜ್ಯೋತಿ ಬಸು, ಅಂಜಿನಪ್ಪ, ವಿನೋದ್ ಕುಮಾರ್, ಕಬೀರ್ ಅಹಮದ್, ನವಾಜ್ ಅಹಮದ್ ಖಾನ್, ಹರೀಶ್ ತಿಮ್ಮರಾಜು, ಅಜಯ್ ಕುಮಾರ್, ಲಿಯಾಕತ್, ಕೇಶವ ಎಂಬವರನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

ರೇಸ್ ಕೋರ್ಸ್ ರಸ್ತೆಯ ಟರ್ಪ್ ಕ್ಲಬ್ ನ ಗೇನ್ ನಂಬರ್ ಮೂರು, 1ನೇ ಎನ್ ಕ್ಲೋಸರ್ಸ್ ನಲ್ಲಿ ಇವರು ಕುದುರೆ ರೇಸ್ ಮೇಲೆ ಅನಧಿಕೃತವಾಗಿ ಬೆಟ್ಟಿಂಗ್ ಕಟ್ಟುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತರಿಂದ 5,91.000 ರೂ. ನಗದು ಹಾಗೂ ಇತರ ಕೆಲವೊಂದು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲುಗೊಂಡಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
187

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು