ಬೆಂಗಳೂರು: ಬೆಂಗಳೂರಿನ ಜೀವನಭೀಮಾನಗರ ಠಾಣಾ ವ್ಯಾಪ್ತಿಯಲ್ಲಿ ಕಾಲೇಜು ವಿದ್ಯಾರ್ಥಿನಿಯೋರ್ವಳು ಪಿಜಿ ಕಟ್ಟಡದ ಮೇಲಿನಿಂದ ಹಾರಿ ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ.ಭವ್ಯ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ಭ್ಯವ್ಯಾ ಜ್ಯೋತಿನಿವಾಸ್ ಕಾಲೇಜಿನಲ್ಲಿ ಬಿಕಾಂ ಓದುತ್ತಿದ್ದಳು.
ಕಾಲೇಜಿನಿಂದ ತನ್ನನ್ನು ಡಿಬಾರ್ ಮಾಡಿದ್ದಾರೆ ಎಂದು ಮನನೊಂದ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.ಪರೀಕ್ಷೆ ವೇಳೆ ಭವ್ಯಾ ಕಾಪಿ ಮಾಡಿದ್ದಾಳೆ ಎಂಬ ಆರೋಪದಲ್ಲಿ ಆಕೆಯನ್ನು ಕಾಲೇಜು ಆಡಳಿತ ಮಂಡಳಿ ಡಿಬಾರ್ ಮಾಡಿತ್ತು ಎನ್ನಲಾಗಿದೆ.
ತನ್ನನ್ನು ಕಾಲೇಜಿನಿಂದ ಡಿಬಾರ್ ಮಾಡಲಾಗಿದೆ ಎಂದು ಸಹೋದರಿಗೆ ಕರೆ ಮಾಡಿ ಹೇಳಿದ್ದ ಭವ್ಯಾ ಕಣ್ಣೀರಿಟ್ಟಿದ್ದಳು. ಅಲ್ಲದೇ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಿಳಿಸಿದ್ದಳು. ಸಹೋದರಿ ದಿವ್ಯಾ ಆಕೆಯನ್ನು ಸಮಾಧಾನಪಡಿಸಿ, ತಂದೆಗೆ ವಿಷಯ ತಿಳಿಸಿದ್ದಳು. ಆದರೆ ಅಷ್ಟರಲ್ಲಿ ಭವ್ಯಾ ತಾನು ವಾಸವಾಗಿದ್ದ ಪಿಜಿಯ 5ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಜೀವನಭೀಮಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.