News Karnataka Kannada
Friday, April 26 2024
ಬೆಂಗಳೂರು ನಗರ

ಬೆಂಗಳೂರಿನಲ್ಲಿ ನಂದಿನಿ ನಕಲಿ ತುಪ್ಪದ ಜಾಲ ಪತ್ತೆ: ಕೆಎಂಎಫ್ ಅಧಿಕಾರಿಗಳಿಂದ ಪರಿಶೀಲನೆ

Ghee
Photo Credit : IANS

ಬೆಂಗಳೂರು : ಸಾಂಸ್ಕೃತಿಕ ನಗರಿ ಮೈಸೂರಿನ ಬಳಿಕ ರಾಜಧಾನಿ ಬೆಂಗಳೂರಿನಲ್ಲಿಯೂ ನಂದಿನಿ ನಕಲಿ ತುಪ್ಪದ ಜಾಲ ಪತ್ತೆಯಾಗಿದ್ದು, ಕೆಎಂಎಫ್ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

ಮೈಸೂರಿನಲ್ಲಿ ಉತ್ಪಾದಿಸಲ್ಪಟ್ಟ ನಕಲಿ ತುಪ್ಪ ಬೆಂಗಳೂರು ಹಾಗೂ ಸುತ್ತಮುತ್ತ ಮಾರಾಟ ಮಾಡಲಾಗುತ್ತಿದೆ ಎಂಬ ಅನುಮಾನ ವ್ಯಕ್ತವಾಗಿದ್ದು, ಈ ಹಿನ್ನೆಲೆಯಲ್ಲಿ ಹಲವು ಅಧಿಕಾರಿಗಳ ವಿಶೇಷ ತಂಡ ರಚನೆ ಮಾಡಿ ಕೆಎಂಎಫ್ ಅಧಿಕಾರಿಗಳು ಹಲವೆಡೆ ದಾಳಿ ನಡೆಸಿದ್ದಾರೆ.

ಹನುಮಂತನಗರ, ಜಯನಗರ, ರಾಜಾಜಿನಗರ, ನೆಲಮಂಗಲ, ಮಾಕಳಿ, ಹೊಸಕೋಟೆಯ ದೇವನಗೊಂದಿ ಹಾಗೂ ಇತರ ಭಾಗಗಳಲ್ಲಿ ಅಧಿಕಾರಿಗಳು ಅಂಗಡಿಗಳು ಹಾಗೂ ಗೋದಾಮುಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.

ದಾಳಿ ವೇಳೆ ನಂದಿನಿ ತುಪ್ಪದ 1000 ಮಿಲಿ ಸ್ಯಾಚೆ, 15 ಕೆಜಿ ಟಿನ್ ಮಾದರಿಯ ನಕಲಿ ತುಪ್ಪ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು