
ಬೆಂಗಳೂರು: ಒಂದೆಡೆ ಕೊರೋನಾ ಹರಡುವಿಕೆ ಹಾಗೂ ಅದರ ಕುರಿತಾದ ಚಿಂತನೆಗಳು ನಡೆಯುತ್ತಿದ್ದರೆ ಇನ್ನೊಂದೆಡೆ ರಾಜ್ಯದಲ್ಲಿ ಅಧಿಕಾರಿಗಳ ವರ್ಗಾವಣೆ ಮುಂದುವರೆದಿದೆ.
ಎರಡು ದಿನಗಳ ಹಿಂದೆಯಷ್ಟೇ ಮೈಸೂರಿನ ಇಬ್ಬರು ಐಎಎಸ್ ಅಧಿಕಾರಿಗಳನ್ನು ವರ್ಗಾಯಿಸಲಾಗಿತ್ತು. ಇದೀಗ ಮತ್ತೆ 12 ಐಪಿಎಸ್ ಅಧಿಕಾರಿಗಳನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡುತ್ತಿದೆ.
12 ಮಂದಿಯಲ್ಲಿ ಬೆಂಗಳೂರು ಗ್ರಾಮಾಂತರ ಎಸ್‌ಪಿ ರವಿ ಡಿ. ಚೆನ್ನಣ್ಣವರ್, ಉಡುಪಿಯ ಎಸ್‌ಪಿಯಾಗಿದ್ದ R.ಚೇತನ್, ಕಾರ್ತಿಕ್ ರೆಡ್ಡಿ, ರಾಹುಲ್ ಕುಮಾರ್ ಮುಂತಾದವರು ಸೇರಿದ್ದಾರೆ.
ವರ್ಗಾವಣೆಗೊಂಡ ಐಪಿಎಸ್ ಅಧಿಕಾರಿಗಳ ಪಟ್ಟಿ
1. ಬೆಂಗಳೂರು ಗ್ರಾಮಾಂತರ ಎಎಸ್‌ಪಿಯಾಗಿದ್ದ ರವಿ ಡಿ. ಚೆನ್ನಣ್ಣನವರ್ ಅವರನ್ನ ಸಿಐಡಿ ಎಸ್‌ಪಿಗೆ ವರ್ಗಾವಣೆ ಮಾಡಲಾಗಿದೆ.
2. ಉಡುಪಿ ಎಸ್‌ಪಿಯಾಗಿದ್ದ R.ಚೇತನ್ ಅವರನ್ನ ಮೈಸೂರು ಪೊಲೀಸ್ ವರಿಷ್ಠಾಧಿಕಾರಿಯಾಗಿ ವರ್ಗಾಯಿಸಲಾಗಿದೆ.
3.ಕಾರ್ತಿಕ್ ರೆಡ್ಡಿ ಕೋಲಾರದಿಂದ ವೈರ್ ಲೆಸ್ ಎಸ್‌ಪಿ ಬೆಂಗಳೂರು.
4. ರಾಹುಲ್ ಕುಮಾರ್ ಸಿಐಡಿಯಿಂದ ತುಮಕೂರು ಎಸ್‌ಪಿಯಾಗಿ ವರ್ಗಾವಣೆ
5. ಹನುಮಂತರಾಯ ದಾವಣಗೆರೆಯಿಂದ ಹಾವೇರಿಗೆ ವರ್ಗ
6. ಎ ಎನ್ ಪ್ರಕಾಶ್ ಗೌಡ, ಎಸ್ ಪಿ ಅಂತರಿಕ ಭದ್ರತಾ ವಿಭಾಗ ಬೆಂಗಳೂರು.
7. ಕೆ ಜಿ ದೇವರಾಜು, ಎಸ್ ಪಿ ಸಿಐಡಿ
8. ಸಿ ಬಿ ರಿಷ್ಯಂತ್, ಎಸ್ ಪಿ ದಾವಣಗೆರೆ.
9. ಡೆಕ್ಕ ಕಿಶೋರ್ ಬಾಬು, ಎಸ್ ಪಿ ಕೋಲಾರ.
10. ಕೊನಾ ವಂಶಿಕೃಷ್ಣ, ಎಸ್ ಪಿ ಬೆಂಗಳೂರು ಗ್ರಾಮಾಂತರ.
11. ಪ್ರದೀಪ್ ಗುಂಟಿ, ಡಿಸಿಪಿ ಮೈಸೂರು ಕಾನೂನು ಸುವ್ಯವಸ್ಥೆ.
12. ಅಡ್ಡೂರು ಶ್ರೀನಿವಾಸುಲು, ಡಿಸಿಪಿ ಕಲಬುರಗಿ, ಕಾನೂನು ಸುವ್ಯವಸ್ಥೆ.