News Kannada
Thursday, July 07 2022

ಬೆಂಗಳೂರು ನಗರ

ಪಾಲಿಕೆಯಲ್ಲಿನ ಖಾಲಿಹುದ್ದೆ ಭರ್ತಿಗೆ ಕ್ರಮ - 1 min read

Photo Credit :

ಪಾಲಿಕೆಯಲ್ಲಿನ ಖಾಲಿಹುದ್ದೆ ಭರ್ತಿಗೆ ಕ್ರಮ

ಬೆಂಗಳೂರು: ವಿವಿಧ ಮಹಾನಗರ ಪಾಲಿಕೆ, ನಗರ ಸ್ಥಳೀಯ ಸಂಸ್ಥೆಗಳಲ್ಲಿ 3000ಕ್ಕೂ ಹೆಚ್ಚು ಖಾಲಿಯಿರುವ ಹುದ್ದೆಗಳನ್ನು ಸದ್ಯದಲ್ಲೇ ಭರ್ತಿ ಮಾಡಲಾಗುವುದು ಎಂದು ಹೇಳಿರುವ ನಗರಾಭಿವೃದ್ಧಿ ಸಚಿವ ವಿನಯ್ ಕುಮಾರ್ ಸೊರಕೆ ಅವರು ಭರ್ತಿ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಮಹಾನಗರ ಪಾಲಿಕೆಗಳಲ್ಲಿ ಒಟ್ಟು 1697 ಡಿ ಗ್ರೂಫ್ ಹುದ್ದೆಗಳು ಖಾಲಿ ಇವೆ ಇವುಗಳನ್ನು ಭರ್ತಿ ಮಾಡಲು ಮಹಾನಗರ ಪಾಲಿಕೆಗಳ ವ್ಯಾಪ್ತಿಯ ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ. ಇದೇ ರೀತಿ ನಗರಾಭಿವೃದ್ಧಿ ಇಲಾಖೆಯಲ್ಲಿ 1055 ಹುದ್ದೆಗಳನ್ನು ಭರ್ತಿ ಮಾಡಲು ಕರ್ನಾಟಕ ಲೋಕಸೇವಾ ಆಯೋಗಕ್ಕೆ ಪತ್ರ ಬರೆಯಲಾಗಿದ್ದು ಇನ್ನೊಂದು ವಾರದೊಳಗೆ ಈ ಕುರಿತ ಅಧಿಸೂಚನೆ ಹೊರಬೀಳಿದೆ ಎಂದು ಹೇಳಿದರು.

ಇದೇ ರೀತಿ ನಗರ ಯೋಜನಾ ಇಲಾಖೆಯಲ್ಲಿ 177 ಹುದ್ದೆಗಳು ಖಾಲಿ ಇವೆ.ಇವುಗಳನ್ನು ಸಹ ತಕ್ಷಣವೇ ಭರ್ತಿ ಮಾಡಲು ಚಾಲನೆ ನೀಡಲಾಗಿದೆ ಎಂದು ಅವರು ಇದೇ ಸಂದರ್ಭದಲ್ಲಿ ಸ್ಪಷ್ಟ ಪಡಿಸಿದರು. ಇಲಾಖೆಯಲ್ಲಿ ಒಟ್ಟು ಮೂರು ಮುಖ್ಯ ಇಂಜಿನಿಯರ್ ಹುದ್ದೆಗಳು ಖಾಲಿ ಇವೆ. ಇವುಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಇದೇ ಸಂದರ್ಭದಲ್ಲಿ ಅವರು ವಿವರ ನೀಡಿದರು.

ಹಾಗೆಯೇ ಯಾರ್ಯಾರಿಗೆ ಬಡ್ತಿ ನೀಡಬೇಕು ಎಂಬ ವಿಷಯದಲ್ಲಿ ಸರ್ಕಾರ ಪರಿಶೀಲನೆ ನಡೆಸುತ್ತಿದ್ದು ಅರ್ಹರಿಗೆ ತಕ್ಷಣವೇ ಈ ಬಡ್ತಿಯನ್ನು ದೊರಕಿಸಿಕೊಡಲಾಗುವುದು ಎಂದು ಅವರು ಸ್ಪಷ್ಟ ಪಡಿಸಿದರು. ರಾಜ್ಯದ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಮೃತಪಟ್ಟವರ ಕುಟುಂಬಗಳವರಿಗೆ ಅನುಕಂಪದ ಆಧಾರದ ಮೇಲೆ ಹುದ್ದೆಗಳನ್ನು ನೀಡಲಾಗುತ್ತಿದ್ದು,2014-15 ರಲ್ಲಿ 153 ಮಂದಿಗೆ,ಈಗ 26 ಮಂದಿಗೆ ನೀಡಲಾಗಿದೆ.

ಹೀಗೆ ಅನುಕಂಪದ ಆಧಾರದ ಮೇಲೆ 179 ಹುದ್ದೆಗಳನ್ನು ಭರ್ತಿ ಮಾಡಲಾಗಿದ್ದು,ಇನ್ನೂ 90 ಅರ್ಜಿಗಳು ಬಾಕಿ ಇವೆ.ಈ ಎಲ್ಲ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಿ ಅನುಕಂಪ ಆಧಾರಿತ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದು ಹೇಳಿದರು.

ಇನ್ನು ಇಲಾಖೆಯಲ್ಲಿ 100 ಮಂದಿ ಸಹಾಯಕ ಅಭಿಯಂತರರ ಹುದ್ದೆಗಳು ಖಾಲಿ ಇವೆ.ಮತ್ತು 31 ಮಂದಿ ಪ್ರಥಮ ದರ್ಜೆ ಸಹಾಯಕ ಹುದ್ದೆಗಳು ಖಾಲಿ ಇವೆ.ಈ ಎಲ್ಲವನ್ನೂ ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗುವುದು. ಪರಿಶಿಷ್ಟ ಜಾತಿ, ಪಂಗಡದವರಿಗೆ 53 ಹುದ್ದೆಗಳನ್ನು ಬ್ಯಾಕ್ ಲಾಗ್ ಆಧಾರದ ಮೇಲೆ ಭರ್ತಿ ಮಾಡಲಾಗುವುದು ಎಂದು ಇದೇ ಸಂದರ್ಭದಲ್ಲಿ ಸಚಿವ ವಿನಯ ಕುಮಾರ್ ಸೊರಕೆ ತಿಳಿಸಿದರು.

See also  ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ಐವರ ಸಾವು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು