News Kannada
Thursday, July 07 2022

ಬೆಂಗಳೂರು ನಗರ

ಚಲಿಸುತ್ತಿದ್ದ ಬಸ್ಸಿನಲ್ಲಿ ಯುವತಿಯ ಅತ್ಯಾಚಾರ: ಆರೋಪಿಗಳ ಬಂಧನ - 1 min read

Photo Credit :

ಚಲಿಸುತ್ತಿದ್ದ ಬಸ್ಸಿನಲ್ಲಿ ಯುವತಿಯ ಅತ್ಯಾಚಾರ: ಆರೋಪಿಗಳ ಬಂಧನ

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಸೂಲಿಬೆಲೆ ಬಳಿ ಚಲಿಸುತ್ತಿದ್ದ ಮಿನಿ ಬಸ್ ನಲ್ಲಿ  ಚಾಲಕನೇ ಯುವತಿಯೊಬ್ಬಳ ಮೇಲೆ ಅತ್ಯಾಚಾರವೆಸಗಿರುವ ಘಟನೆ ಗುರುವಾರ ಬೆಳಗ್ಗೆ ವರದಿಯಾಗಿದೆ.

B'luru Rape Saga: 19-yr-old girl raped by driver in moving bus-1ಸೂಲಿಬೆಲೆ ಬಳಿಯ ಹಳ್ಳಿಯೊಂದರಲ್ಲಿ  ಬಸ್‌ಗಾಗಿ ಕಾಯುತ್ತಿದ್ದ 19 ವರ್ಷ ಪ್ರಾಯದ ಯುವತಿಯನ್ನು ಬಸ್‌ ನಲ್ಲಿ ಹತ್ತಿಸಿಕೊಂಡ ಚಾಲಕ ಆ ಬಳಿಕ ಕ್ಲೀನರ್‌ಗೆ ಬಸ್‌ ಚಲಾಯಿಸುವಂತೆ ಹೇಳಿ ಬಸ್‌ನ ಎಲ್ಲಾ ಕಿಟಕಿ ಗಾಜುಗಳನ್ನು ಮುಚ್ಚಿ ಹೇಯ ಕೃತ್ಯ ಎಸಗಿದ್ದಾನೆ. ಬಳಿಕ ಯುವತಿಯನ್ನು ಲಕೊಂಡ ಕ್ರಾಸ್‌ ಬಳಿ ಬಸ್‌ನಿಂದ ಹೊರದೂಡಿ ಪರಾರಿಯಾಗಿದ್ದಾರೆ.

ನಂತರ ಯುವತಿಯನ್ನು ಲಕ್ಕೊಂಡನ ಕ್ರಾಸ್ ಬಳಿ ಇಳಿಸಿ, ಇಬ್ಬರು ಪರಾರಿಯಾಗಿದ್ದಾರೆ. ಅಲ್ಲಿಂದ ಯುವತಿ ಹೊಸಕೋಟೆ ಖಾಸಗಿ ಆಸ್ಪತ್ರೆಗೆ ತೆರಳಿ ವೈದ್ಯರ ಬಳಿ ಘಟನೆ ಬಗ್ಗೆ ವಿವರಿಸಿದ್ದಾಳೆ. ಈ ಬಗ್ಗೆ ಆಸ್ಪತ್ರೆ ಸಿಬ್ಬಂದಿ ಸೂಲಿಬೆಲೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಸೂಲಿಬೆಲೆ ಪೊಲೀಸರು, ಹೇಯ ಕೃತ್ಯ ಎಸಗಿದ ಆರೋಪಿ ಶಿವಮೊಗ್ಗ ಮೂಲದ ರವಿ (26) ಮತ್ತು ಆತನಿಗೆ ಸಹಕರಿಸಿದ ಕ್ಲೀನರ್‌ ಚಿಂತಾಮಣಿ ಮೂಲದ ಮಂಜುನಾಥ್ (23) ಎನ್ನುವವರನ್ನು ಬಂಧಿಸಿ ಕೃತ್ಯ ನಡೆದಿರುವ ಬಸ್ಸನ್ನು ವಶಕ್ಕೆ ಪಡೆದಿದ್ದಾರೆ.

See also  ಗುತ್ತಿಗೆ ಆಧಾರದಲ್ಲಿ ನೇಮಕಗೊಂಡಿದ್ದ ನೌಕರರಿಗೆ ಸಿಹಿಸುದ್ದಿ ನೀಡಿದ ಡಾ.ಕೆ. ಸುಧಾಕರ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು