News Kannada
Wednesday, July 06 2022

ಬೆಂಗಳೂರು ನಗರ

ಸರ್ಕಾರದಿಂದ ರೈತರಿಗೆ ಶಾಶ್ವತ ಪರಿಹಾರ ಸಾಧ್ಯವಿಲ್ಲ: ಪರಮೇಶ್ವರ್‌ - 1 min read

Photo Credit :

 ಸರ್ಕಾರದಿಂದ ರೈತರಿಗೆ ಶಾಶ್ವತ ಪರಿಹಾರ ಸಾಧ್ಯವಿಲ್ಲ: ಪರಮೇಶ್ವರ್‌

ಬೆಂಗಳೂರು: ರೈತರು ಆತ್ಮಹತ್ಯೆ ಮಾಡಿಕೊಂಡಾಗ ಸರ್ಕಾರ ಅವರಿಗೆ ಶಾಶ್ವತ ಪರಿಹಾರ ನೀಡಲು ಸಾಧ್ಯವಿಲ್ಲ. ಆದ್ದರಿಂದ ಸಹಕಾರ ಸಂಘಗಳು ಮುಂದೆ ಬಂದು, ತಮ್ಮ ಲಾಭಾಂಶದಲ್ಲಿ ಒಂದಷ್ಟು ಸೆಸ್ ರೂಪದಲ್ಲಿ ಮೀಸಲಿಡಬೇಕು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಹೇಳಿದರು.

Home minister assures action against those involved in Madikeri clash-1ರಾಜ್ಯದಲ್ಲಿ ಜುಲೈನಿಂದ ಈವರೆಗೆ 700 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತ ರೈತ ಕುಟುಂಬಗಳಿಗೆ ಸಾಂತ್ವನ ಹೇಳಿ ಪರಿಹಾರ ನೀಡಲಾಗಿದೆ. ಇದರಿಂದ ರೈತರಿಗೆ ಶಾಶ್ವತ ಪರಿಹಾರ ಸಿಗುವುದಿಲ್ಲ. ರೈತರ ಸಂಕಷ್ಟಗಳಿಗೆ ಪ್ರತಿ ಕ್ಷೇತ್ರದವರೂ ನೆರವಾಗಬೇಕು. ಸಹಕಾರ ಸಂಘಗಳು ಶಿಕ್ಷಣ ಕ್ಷೇತ್ರಕ್ಕೆ ಲಾಭಾಂಶದ ಶೇ.2ರಷ್ಟು ಮೊತ್ತ ನೀಡುವಂತೆ ರೈತರಿಗೂ ಒದಗಿಸಬೇಕು ಎಂದು ಹೇಳಿದರು.

ಸಹಕಾರಿ ಕ್ಷೇತ್ರದಲ್ಲಿರುವವರ ಮೇಲೆ ದೊಡ್ಡ ಜವಾಬ್ದಾರಿ ಇರುತ್ತದೆ. ಅದನ್ನು ಮರೆತು ಅನೇಕ ಸಂದರ್ಭದಲ್ಲಿ ಸಹಕಾರಿ ಧುರೀಣರು ನೂರಾರು ಕೋಟಿ ರೂ. ಭ್ರಷ್ಟಾಚಾರ ನಡೆಸಿ ದೊಡ್ಡ ದೊಡ್ಡ ಸಹಕಾರಿ ಸಂಘಗಳನ್ನು ಮುಳುಗಿಸಿಬಿಡುತ್ತಾರೆ. ಇಂತಹವರನ್ನು ಸರ್ಕಾರ ಒಂದಲ್ಲಾ ಒಂದು ರೀತಿ ಮನ್ನಿಸಿಬಿಡುತ್ತದೆ. ಇದು ಯಾವುದೇ ಕಾರಣಕ್ಕೂ ಆಗಬಾರದು ಎಂದರು.

See also  ಮೂರು ರೈಲ್ವೆ ನಿಲ್ದಾಣಗಳಿಗೆ ಹುಸಿ ಬಾಂಬ್ ಬೆದರಿಕೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು