ಬೆಂಗಳೂರು: ವಿಧಾನಸಭೆ ಕಲಾಪದಲ್ಲಿ ರೈತರ ಆತ್ಮಹತ್ಯೆ ಬಗ್ಗೆ ಚರ್ಚೆ ನಡೆಯುತ್ತಿದ್ದ ಸಂದರ್ಭ ಮಾಜಿ ಸಚಿವ, ಬಿಜೆಪಿ ನಾಯಕ ಉಮೇಶ್ ಕತ್ತಿ ಗುಟ್ಕಾ ತಿನ್ನಲು ಗುಟ್ಕಾ ಪ್ಯಾಕೆಟ್ ತೆಗೆದು ತಿನ್ನಲು ಮುಂದಾದರು.
ಗುಟ್ಕಾದೊಂದಿಗೇ ಸದನಕ್ಕೆ ಆಗಮಿಸಿದ್ದ ಉಮೇಶ್ ಕತ್ತಿ, ತಾವು ಕೂತಿದ್ದ ಜಾಗದಲ್ಲೇ ಗುಟ್ಕಾದ 2 ಪಾಕೆಟ್ ಗಳನ್ನ ಹೊರತೆಗೆದು ಒಂದು ಪಾಕೆಟ್ ಅನ್ನು ಟೇಬಲ್ ಮೇಲಿಟ್ಟರು. ಮತ್ತೊಂದು ಪ್ಯಾಕೆಟ್ ನ ತೆಗೆದು ಅದನ್ನ ಬಾಯಲ್ಲಿ ಹಾಕಿಕೊಳ್ಳುವ ಉದ್ದೇಶದಿಂದ ಪ್ಯಾಕೆಟ್ ಹರಿದ್ರು. ಅಷ್ಟರಲ್ಲಿ, ಮಾಧ್ಯಮದವರ ಕ್ಯಾಮೆರಾಗಳು ತಮ್ಮ ಗುಟ್ಕಾವನ್ನೇ ಫೋಕಸ್ ಮಾಡ್ತಾರಂತ ಎಚ್ಚೆತ್ತುಕೊಂಡು ಗುಟ್ಕಾ ತಿನ್ನದೇ ಸುಮ್ಮನಾದ್ರು.