ಬೆಂಗಳೂರು: ಪೇರುಪೇಟೆಯಲ್ಲಿ ಹಣ ಹೂಡುವುದಾಗಿ ನಂಬಿಸಿ ಸುಮಾರು 34 ಕೋಟಿ ರೂಪಾಯಿ ವಂಚಿಸಿದ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.
ಬಿಟಿಎಂ ಲೇಔಟ್ ಹೆಚ್ಡಿಎಫ್ಸಿ ವಿಮಾ ಕಂಪನಿಯ ವ್ಯವಸ್ಥಾಪಕಿ ವಿಶಾಲಾಕ್ಷಿ ಭಟ್ ಇನ್ಸೂರೆನ್ಸ್ ಮಾಡಿಸುವುದಾಗಿ ಹೇಳಿ ಹಣ ಪಡೆದು ಪರಾರಿಯಾಗಿದ್ದಾರೆ ಎಂದು ಮಡಿವಾಳ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ಆರೋಪಿಸಲಾಗಿದೆ. ಆದ್ರೆ ಸದ್ಯ ದಾಖಲಾಗಿರುವ ಎರಡು ಪ್ರತ್ಯೇಕ ದೂರುಗಳಲ್ಲಿ ಒಂದು 10 ಲಕ್ಷ ರೂ ಮತ್ತೊಂದು 15 ಲಕ್ಷ ರೂ.ಗಳೆಂದು ದಾಖಲಾಗಿವೆ. ಐಪಿಸಿ ಸೆಕ್ಷನ್ 406, 420 ಅಡಿಯಲ್ಲಿ ಕೇಸ್ ದಾಖಲಿಸಿಕೊಂಡಿರುವ ಮಡಿವಾಳ ಪೊಲೀಸರು ವಿಶಾಲಾಕ್ಷಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.