ಬೆಂಗಳೂರು: ಚಿಕ್ಕಪ್ಪನಿಂದ ಹಣ ವಸೂಲಿ ಮಾಡುವ ಸಂಚು ರೂಪಿಸಿ ತನ್ನ ತಮ್ಮನನ್ನೇ ಅಪಹರಣ ಮಾಡಿ ಒತ್ತೆಯಾಗಿಟ್ಟುಕೊಂಡು 5 ಕೋಟಿ ಹಣಕ್ಕೆ ಒತ್ತಾಯಿಸುತ್ತಿದ್ದ ಆರೋಪಿಯನ್ನು ಇಲ್ಲಿನ ಬ್ಯಾಟರಾಯನಪುರ ಪೊಲೀಸರು ಬಂಧಿಸಿದ್ದಾರೆ.
ಹರೀಶ್ ಕುಮಾರ್ ಎಂಬಾತ ಬಂಧಿತ ಆರೋಪಿ. ಚಿಕ್ಕಪ್ಪನಿಂದ ಹಣ ವಸೂಲಿ ಮಾಡಲು ತನ್ನ ತಮ್ಮನನ್ನೇ ಅಪಹರಣ ಮಾಡಿಸಿ ಮೈಸೂರು ಮತ್ತು ಮಡಿಕೇರಿಯಲ್ಲಿ ಒತ್ತೆಯಾಗಿಟ್ಟುಕೊಂಡು 5 ಕೋಟಿ ಹಣಕ್ಕಾಗಿ ಒತ್ತಾಯಿಸುತ್ತಿದ್ದ. ಮಾಹಿತಿ ಪಡೆದ ಬ್ಯಾಟರಾಯನಪುರದ ಪೊಲೀಸರು ಆರೋಪಿಗಳನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಕಾರ್ಯಾಚರಣೆಯನ್ನು ಬೆಂಗಳೂರು ನಗರ ಪಶ್ಚಿಮ ವಿಭಾಗದ ತಂಡದ ನೇತೃತ್ವದಲ್ಲಿ ಬ್ಯಾಟರಾಯನಪುರ ಪೊಲೀಸ್ ಇನ್ಸ್ ಪೆಕ್ಟರ್ ಆರ್.ಹೇಮಂತ್ ಕುಮಾರ್ ಮತ್ತು ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಗಳಾದ ಎಸ್.ಕೃಷ್ಣಮೂರ್ತಿ ಹಾಗೂ ಸಿ.ಲಕ್ಷಣ್, ಸಿಬ್ಬಂದಿಗಳಾದ ವೆಂಕಟರಮಣಪ್ಪ, ರಾಜೇಶ್, ಮಂಜುನಾಥ್, ಪ್ರಕಾಶ್, ನವೀನ್ ಕುಮಾರ್, ನಾಗರಾಜು ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.