News Kannada

ಬೆಂಗಳೂರು ನಗರ

ತಂತ್ರಜ್ಞಾನ ಬಳಕೆಯಲ್ಲಿ ರಾಜ್ಯಕ್ಕೆ ಅಗ್ರಸ್ಥಾನ - 1 min read

ತಂತ್ರಜ್ಞಾನ ಬಳಕೆಯಲ್ಲಿ ರಾಜ್ಯಕ್ಕೆ ಅಗ್ರಸ್ಥಾನ

ಬೆಂಗಳೂರು: ಸೌಲಭ್ಯಗಳನ್ನು ಜನರಿಗೆ ವಿವಿಧ ಸ್ಥರಗಳಲ್ಲಿ ಪಾರದರ್ಶಕವಾಗಿ ಒದಗಿಸುವ ವಿಚಾರದಲ್ಲಿ ಕರ್ನಾಟಕ ಸರ್ಕಾರ ದೇಶದಲ್ಲೇ ಮುಂಚೂಣಿಯಲ್ಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಸಮಾರಂಭವೊಂದರಲ್ಲಿ ಮಾತನಾಡಿದ ಅವರು, ಸೀಮಿತ ಹಿಡಿತ-ಅಪರಿಮಿತ ಆಡಳಿತ ಪರಿಕಲ್ಪನೆಯೊಂದಿಗೆ ಆಡಳಿತದಲ್ಲಿ ಉತ್ತಮ ಸುಧಾರಣೆ ತರುವಲ್ಲಿ ಮಾಹಿತಿ ತಂತ್ರಜ್ಞಾನ ಪ್ರಮುಖವಾಗಿದ್ದು, ರಾಜ್ಯ ಸರ್ಕಾರ ಮಾಹಿತಿ ತಂತ್ರಜ್ಞಾನ ಬಳಕೆಯಲ್ಲಿ ದೇಶದಲ್ಲೇ ಅಗ್ರಸ್ಥಾನದಲ್ಲಿದೆ ಎಂದು ಹೇಳಿದರು.

ಜನರಿಗೆ ಎಲ್ಲ ಮಾಹಿತಿಯನ್ನು ಬೆರಳ ತುದಿಯಲ್ಲಿ ಒದಗಿಸುವ ಮೊಬೈಲ್-ಒನ್ ಸೇವೆಯನ್ನು ದೇಶದಲ್ಲಿ ಜಾರಿಗೆ ತಂದ ಮೊದಲ ರಾಜ್ಯ ಕರ್ನಾಟಕವಾಗಿದೆ. ಈ ಸೇವೆಗೆ ಈಗಾಗಲೇ ಹಲವು ಪ್ರಶಸ್ತಿಗಳನ್ನು ರಾಜ್ಯ ಪಡೆದುಕೊಂಡಿದೆ, ರಾಜ್ಯದ ಆರೂವರೆ ಕೋಟಿ ಜನಸಂಖ್ಯೆಯಲ್ಲಿ 5 ಕೋಟಿ 40 ಲಕ್ಷ ಜನರು ಮೊಬೈಲ್ ಸಂಪರ್ಕ ಹೊಂದಿದ್ದು, ನಾಗರಿಕರಿಗೆ ಮೊಬೈಲ್-ಒನ್ ಸೇವೆ ಒದಗಿಸುವುದು ಮತ್ತಷ್ಟು ಸುಲಭವಾಗಿದೆ ಎಂದು ಅವರು ತಿಳಿಸಿದರು.

ಮೊಬೈಲ್-ಒನ್ ಸೇವೆಯಡಿ ಗ್ರಾಹಕರು ದಿನವೊಂದಕ್ಕೆ ಒಂದು ಲಕ್ಷಕ್ಕೂ ಹೆಚ್ಚು ಬಾರಿ ಸೇವಾ ಸಂಪರ್ಕ ಸಾಧಿಸುತ್ತಿದ್ದು, ಸೇವಾ ಪ್ರಮಾಣದಲ್ಲೂ ಏರಿಕೆಯಾಗುತ್ತಿದೆ ಎಂದು ಅವರು ಹೇಳಿದರು. ಇನ್ನೂ ಉತ್ತಮ ಹಾಗೂ ಹೆಚ್ಚಿನ ಮಾಹಿತಿ ತಂತ್ರಜ್ಞಾನ ಸೇವಾ ಜಾಲಕ್ಕೆ ಸಂಬಂಧಿಸಿದಂತೆ ಅಮೆರಿಕದ ಕೆಲವು ರಾಜ್ಯಗಳಲ್ಲಿ ಜಾರಿಯಲ್ಲಿರುವ ಓಪನ್-ತ್ರೀ-ಒನ್-ಒನ್ ತಂತ್ರಜ್ಞಾನ ಬಳಕೆಗೆ ಕರ್ನಾಟಕ ಸರ್ಕಾರ ಮುಂದಾಗಿದೆ, ಮೊಬೈಲ್-ಒನ್ ಮೂಲಕ ಅಮೆರಿಕ ಮಾದರಿಯ ಸಂಪರ್ಕಜಾಲ ವಿನ್ಯಾಸ ಕಾರ್ಯದಲ್ಲಿ ನಿರತವಾಗಿದೆ, ಇದು ಸರ್ಕಾರದ ಹೆಮ್ಮೆಯ ಕಾರ್ಯಕ್ರಮವೂ ಆಗಿದೆ ಎಂದು ಅವರು ಹೇಳಿದರು.

ರಾಜ್ಯ ಸರ್ಕಾರಗಳು ತಮ್ಮ ಎಲ್ಲಾ ಇಲಾಖೆಗಳ ಮಾಹಿತಿಗಳನ್ನು ಆಧಾರ್ನೊಂದಿಗೆ ಸಂಯೋಜನೆ ಮಾಡಬೇಕೆಂಬ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಣತಿಯಂತೆ, ಕರ್ನಾಟಕ ಸರ್ಕಾರ ಈಗಾಗಲೇ ಈ ಕಾರ್ಯದಲ್ಲಿ ನಿರತವಾಗಿದ್ದು, ಈ ವ್ಯವಸ್ಥೆ ಜಾರಿಯಿಂದ ನಕಲು ಹಾವಳಿ ತಪ್ಪಿಸಬಹುದಲ್ಲದೆ, ಸೇವೆಯನ್ನು ಮತ್ತಷ್ಟು ಸದೃಢಗೊಳಿಸಬಹುದಾಗಿದೆ ಎಂದು ಅವರು ತಿಳಿಸಿದರು.

ಕರ್ನಾಟಕ ಸರ್ಕಾರ ಮಾಹಿತಿ ತಂತ್ರಜ್ಞಾನ ಬಳಕೆಯಲ್ಲಿ ಅನೇಕ ಮೈಲಿಗಲ್ಲು ಸಾಧಿಸಿದೆ, ಈಗಾಗಲೇ, ಭೂಮಿ, ಸಕಾಲ, ಮೋಜಿಣಿ, ಇ-ಖಜಾನೆ, ಇ-ಸುಗಮ್, ಇ-ಪ್ರೊಕ್ಯೂರ್ಮೆಂಟ್, ಇ-ಸ್ವತ್ತು ಸೇರಿದಂತೆ ಹಲವು ವಿದ್ಯುನ್ಮಾನ ಸೇವಾ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ, ರಾಜ್ಯ ಸರ್ಕಾರದ ಇ-ಸುಗಮ್ ಯೋಜನೆಯು ಪ್ರಧಾನಮಂತ್ರಿಗಳ ಸಾಧನಾ ಪ್ರಶಸ್ತಿಗೆ ಪಾತ್ರವಾಗಿದೆ ಎಂದು ತಿಳಿಸಿದರು.

See also  ಬೆಂಗಳೂರಿನಲ್ಲಿ ಕೊರೋನ ಪರಿಸ್ಥಿತಿ ಸುಧಾರಿಸಲು ದಕ್ಷಿಣ ಕೊರಿಯಾ ನೆರವು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು