News Kannada
Thursday, July 07 2022

ಬೆಂಗಳೂರು ನಗರ

ಬಿಜೆಪಿಯಿಂದ ಸಂವಿಧಾನಿಕ ಬಿಕ್ಕಟ್ಟು: ಖರ್ಗೆ - 1 min read

Photo Credit :

ಬಿಜೆಪಿಯಿಂದ ಸಂವಿಧಾನಿಕ ಬಿಕ್ಕಟ್ಟು: ಖರ್ಗೆ

ಬೆಂಗಳೂರು: ಸ್ಥಳೀಯ ಚುನಾವಣೆಗಳಲ್ಲಿ ಸ್ಪರ್ಧಿಸಲು ವಿದ್ಯಾರ್ಹತೆ ನಿಗದಿ ಮಾಡಿರುವ ಬಿಜೆಪಿ ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಿ ಸಂವಿಧಾನಿಕ ಬಿಕ್ಕಟ್ಟು ಸೃಷ್ಟಿಸಲು ವ್ಯವಸ್ಥಿತ ಷಡ್ಯಂತ್ರ ರೂಪಿಸಿದೆ ಎಂದು ವಿರುದ್ಧ ಕಿಡಿ ಕಾರಿರುವ ಲೋಕಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಆಡಳಿತವಿರುವ ಹರಿಯಾಣ ಮತ್ತು ರಾಜಸ್ಥಾನದಲ್ಲಿ ಚುನಾವಣೆಗೆ ಸ್ಪರ್ಧಿಸಲು ಕನಿಷ್ಠ ಎಸ್ಎಸ್ಎಲ್ಸಿ ಕನಿಷ್ಠ ವಿದ್ಯಾರ್ಹತೆ ನಿಗದಿ ಮಾಡಲಾಗಿದೆ. ಪರಿಶಿಷ್ಟರಿಗೆ 8ನೇ ತರಗತಿ ನಿಗದಿಗೊಳಿಸಲಾಗಿದೆ. ದೇಶದಲ್ಲಿ ಶೇ 50 ರಷ್ಟು ಮಹಿಳೆಯರು ಇನ್ನೂ ಅನಕ್ಷರಸ್ಥರು. ದೇಶದಲ್ಲಿ ಸಂಪೂರ್ಣ ಸಾಕ್ಷರತೆ ಸಾಧಿಸಲು ಸಾಧ್ಯವಾಗಿಲ್ಲ. ಹೀಗಿರುವಾಗ ಶೋಷಿತರನ್ನು ಅಧಿಕಾರದಿಂದ ದೂರ ಇಡುವ ತಂತ್ರ ರೂಪಿಸಲಾಗಿದೆ. ಬಿಜೆಪಿ ಸಿದ್ಧಾಂತಕ್ಕೆ ಕಾನೂನಿನ ಲೇಪ ನೀಡಿ ಜನರಿಗೆ ಅನ್ಯಾಯ ಮಾಡಲಾಗುತ್ತಿದೆ ಎಂದು ದೂರಿದರು.

ಚುನಾವಣೆಯಲ್ಲಿ ಅಕ್ಷರಸ್ಥರೇ ಸ್ಪರ್ಧಿಸಬೇಕು ಎನ್ನುವ ಉದ್ದೇಶವಿದ್ದರೆ ತಮ್ಮ ಪಕ್ಷದಲ್ಲಿ ಅಕ್ಷರಸ್ಥರಿಗೆ ಮಾತ್ರ ಟಿಕೆಟ್ ನೀಡಲಿ. ಅನಕ್ಷರಸ್ಥರನ್ನು ಚುನಾವಣೆ ಸ್ಪರ್ಧೆಯಿಂದ ದೂರ ಇಡಲಿ. ಇದು ಎಲ್ಲಾ ರಾಜಕೀಯ ಪಕ್ಷಗಳಿಗೂ ಬೇಕಿದ್ದರೆ ಅನ್ವಯವಾಗಲಿ. ಆದರೆ ಚುನಾವಣೆಗೆ ಸ್ಪಧರ್ಿಸುವ ಹಕ್ಕು ಕಸಿಯುವುದು ಸರಿಯಲ್ಲ. ಬಿಜೆಪಿ ಶೋಷಿತರಿಂದ ಅಧಿಕಾರ ತಪ್ಪಿಸುವ ವ್ಯವಸ್ಥಿತ ಷಡ್ಯಂತ್ರ ನಡೆಸಿದೆ ಎಂದು ಆರೋಪಿಸಿದರು.

ಯಾವುದೇ ಅಖಾಡದಲ್ಲಿ ಸರಿಸಮನಾದ ಹೋರಾಟ ಇರಬೇಕು. ಆದರೆ ಈ ದೇಶದಲ್ಲಿ ಸಂಪೂರ್ಣ ಸಾಕ್ಷರತೆ ಸಾಧಿಸಿಲ್ಲ. ಇಂತಹ ಅವಕಾಶವನ್ನು ಬಳಸಿಕೊಂಡು ಬಿಜೆಪಿ ತನ್ನ ಕಾರ್ಯಸೂಚಿಯನ್ನು ವ್ಯವಸ್ಥಿತವಾಗಿ ಜಾರಿ ಮಾಡಲು ಮುಂದಾಗಿದೆ. ಸಮಾನತೆ ಸಾಧಿಸದ ಹೊತ್ತಿನಲ್ಲಿ ಚುನಾವಣೆಗೆ ಸ್ಪರ್ಧಿಸುವಾಗ ವಿದ್ಯಾರ್ಹತೆ ನಿಗದಿ ಮಾಡುವುದು ಸರಿಯಲ್ಲ. ಸಂಪೂರ್ಣ ಸಾಕ್ಷರತೆ ಸಾಧಿಸಿದ ನಂತರ ಬೇಕಿದ್ದರೆ ಕನಿಷ್ಠ ವಿದ್ಯಾರ್ಹತೆ ನಿಗದಿಪಡಿಸಿದರೆ ಅಭ್ಯಂತರವಿಲ್ಲ ಎಂದರು.

See also  ಸಮಾಜದಲ್ಲಿ ವೈದ್ಯರಿಗೆ ವಿಭಿನ್ನ ಮತ್ತು ವಿಶಿಷ್ಠ ಸ್ಥಾನವಿದೆ; ಸಚಿವ ಡಾ. ಕೆ. ಸುಧಾಕರ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು