News Kannada
Wednesday, July 06 2022

ಬೆಂಗಳೂರು ನಗರ

ಜ.10, ರಾಷ್ಟ್ರೀಯ ಹೆದ್ದಾರಿ ಪರಿವರ್ತನಾ ಕಾಮಗಾರಿ ಆರಂಭ - 1 min read

Photo Credit :

ಜ.10, ರಾಷ್ಟ್ರೀಯ ಹೆದ್ದಾರಿ ಪರಿವರ್ತನಾ ಕಾಮಗಾರಿ ಆರಂಭ

ಬೆಂಗಳೂರು: ಬೆಂಗಳೂರು- ಮೈಸೂರು ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಪರಿವರ್ತಿಸುವ ಕಾರ್ಯ ಜ. 10 ರಿಂದ ಆರಂಭಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶ ನೀಡಿದ್ದಾರೆ.

ವಿಧಾನ ಸೌಧದಲ್ಲಿ ಸಮಿತಿ ಕೊಠಡಿಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಅಧಿಕಾರಿಗಳೊಟ್ಟಿಗೆ ಸುದೀರ್ಘ ಸಮಾಲೋಚನೆ ನಡೆಸಿದ ನಂತರ ಮುಖ್ಯಮಂತ್ರಿಗಳು ಈ ಕ್ರಮ ಕೈಗೊಂಡಿದ್ದಾರೆ.

ಬೆಂಗಳೂರು-ಮೈಸೂರು ನಡುವಿನ ಹಾಲಿ ನಾಲ್ಕು ಪಥದ ರಸ್ತೆ, ಆರು ಪಥದ ರಸ್ತೆಯನ್ನಾಗಿಯೂ ಜೊತೆಗೆ ಎರಡೂ ಬದಿಗಳಲ್ಲಿ ಸರ್ವೀಸ್ ರಸ್ತೆ ಪ್ರತ್ಯೇಕವಾಗಿರುತ್ತದೆ. ಮೈಸೂರು, ಹುಣಸೂರು, ಮಡಿಕೇರಿ, ಬಂಟ್ವಾಳದವರೆಗೂ ಹಾಲಿ ಎರಡು ಪಥದ ರಸ್ತೆ, ನಾಲ್ಕು ಪಥದ ರಾಷ್ಟ್ರೀಯ ಹೆದ್ದಾರಿಯಾಗಿ ಮಾರ್ಪಟ್ಟುಗೊಳ್ಳುವ ಕಾಮಗಾರಿಗೂ ಅಂದೇ ಚಾಲನೆ ದೊರೆಯಲಿದೆ.

ರಸ್ತೆ ಮಾರ್ಪಾಟಿಗೆ ಸಮಗ್ರ ಯೋಜನಾ ವರದಿ ಬಹುತೇಕ ಸಿದ್ಧಗೊಂಡಿದ್ದು, ಇದರ ಆಧಾರದ ಮೇಲೆ ಅಗತ್ಯವಿರುವ ಭೂ ಸ್ವಾಧೀನ ಕಾರ್ಯವು ಜನವರಿ ತಿಂಗಳಿನಿಂದಲೇ ಆರಂಭಗೊಳ್ಳಲಿದೆ. ಭೂ ಸ್ವಾಧೀನಕ್ಕಾಗಿ ಕೇಂದ್ರ ಸರ್ಕಾರ 2300 ಕೋಟಿ ರೂ.ಗಳನ್ನು ನಿಗಧಿಪಡಿಸಿದೆ, ಅದೇ ರೀತಿ ರಸ್ತೆ ನಿರ್ಮಾಣಕ್ಕಾಗಿ ಪ್ರತ್ಯೇಕವಾಗಿ 3000 ಕೋಟಿ ರೂ.ನ್ನು ಒದಗಿಸಿದೆ. ಭೂ ಸ್ವಾಧೀನ ಕಚೇರಿಯನ್ನು ರಾಮನಗರದಲ್ಲಿ ಆರಂಭಗೊಳ್ಳಲಿದ್ದು, ಈ ಎಲ್ಲಾ ಪ್ರಕ್ರಿಯೆ ಇಲ್ಲಿಂದಲೇ ನಡೆಯಲಿದೆ. ಅಗತ್ಯ ಕಂಡು ಬಂದಲ್ಲಿ ಹೆಚ್ಚುವರಿ ಇಂಜಿನಿಯರ್ಗಳನ್ನು ಬಳಕೆ ಮಾಡಿಕೊಳ್ಳಿ. ಕಠಿಣ ಸಮಸ್ಯೆ ಸಂದರ್ಭದಲ್ಲಿ ಪರ್ಯಾಯ ವ್ಯವಸ್ಥೆ ಕಲ್ಪಿಸಿಕೊಳ್ಳಲು ಸಿದ್ಧತೆ ನಡೆಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಇನ್ನು ಮುಂದೆ ಬೈಪಾಸ್ ರಸ್ತೆ, ನಿರ್ಮಾಣಗೊಂಡ ಪ್ರದೇಶದಲ್ಲಿ ವಾಣಿಜ್ಯ ಚಟುವಟಿಕೆಗೆ ಆಸ್ಪದವಿರುವುದಿಲ್ಲ. ಜೊತೆಗೆ ವಸತಿ ಸಮುಚ್ಚಾಯಗಳು ಅನುವು ಮಾಡಿಕೊಡದಂತೆ ಕಟ್ಟಾದೇಶ ಮಾಡಲಾಗಿದೆ.

See also  ಬೆಂಗಳೂರಿನಲ್ಲಿ ಏದುಸಿರು ಬಿಡುತ್ತಿರುವ ಸೈಕ್ಲಿಂಗ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು