ಬೆಂಗಳೂರು: ಕಳೆದ ವಾರವಷ್ಟೇ ರಿಲೀಸ್ ಆಗಿದ್ದ ಮದುವೆಯ ಮಮತೆಯ ಕರೆಯೋಲೆ ಸಿನಿಮಾ ಪ್ರದರ್ಶನವನ್ನು ರಾಜಾಜಿನಗರದ ಓರಾಯನ್ ಮಾಲ್ ನಲ್ಲಿರುವ ಪಿವಿಆರ್ ಚಿತ್ರಮಂದಿರ ಏಕಾಏಕಿ ನಿಲ್ಲಿಸಿದೆ.
ಚಿತ್ರ ವೀಕ್ಷಣೆಗೆ ನಿನ್ನೆ ರಾತ್ರಿ 10 ಗಂಟೆಗೆ ಬಂದಿದ್ದ ಪ್ರೇಕ್ಷಕರಿಗೆ ಈ ಸಿನಿಮಾ ಬದಲಿಗೆ ಫಸ್ಟ್ ರ್ಯಾಂಕ್ ರಾಜು ಸಿನಿಮಾ ನೋಡಿಕೊಂಡು ಹೋಗುವಂತೆ ಹೇಳಿದೆ. ಇದಕ್ಕೆ ಪ್ರೇಕ್ಷಕರು ಒಪ್ಪದಿದ್ದಾಗ ಬೌನ್ಸರ್ಸ್ ಮುಂದಿಟ್ಟುಕೊಂಡು ಟಿಕೆಟ್ ಹಣ ವಾಪಸ್ಸು ನೀಡಿ ಕಳುಹಿಸಿದೆ. ಈ ಬಗ್ಗೆ ಮಾಹಿತಿ ಪಡೆದ ಚಿತ್ರ ತಂಡ 11 ಗಂಟೆ ಸುಮಾರಿಗೆ ಪಿವಿಆರ್ ಮಂದಿರಕ್ಕೆ ಆಗಮಿಸಿ ಥಿಯೇಟರ್ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿತು.