ಬೆಂಗಳೂರು: ಇಲ್ಲಿನ ಲಾಲ್ ಬಾಗ್ ನಲ್ಲಿ ಇಂದಿನಿಂದ 26ರವರೆಗೆ ಫಲಪುಷ್ಪ ಪ್ರದರ್ಶನ ನಡೆಯಲಿದ್ದು, ಸಚಿವ ಶಾಮನೂರು ಶಿವಶಂಕರಪ್ಪ ಶನಿವಾರ ಚಾಲನೆ ನೀಡಿದರು.
ಈ ಫಲಪುಷ್ಪ ಪ್ರರ್ಶನದಲ್ಲಿ ಬಣ್ಣ ಬಣ್ಣದ ಪುಷ್ಪಗಳು ಪುಷ್ಪ ಪ್ರೇಮಿಗಳನ್ನು ತನ್ನತ್ತ ಆಕರ್ಷಿಸುತ್ತಿದೆ. ಬಣ್ಣ ಬಣ್ಣದ ಪುಷ್ಪಗಳ ಸಿಂಗಾರದೊಂದಿಗೆ ಗಿಡಗಳು ಬಣ್ಣದ ಲೋಕದೊಂದಿಗೆ ನಳ,ನಳಿಸುತ್ತಿದೆ. ಸುಮಾರು 3 ಲಕ್ಷಕ್ಕೂ ಅಧಿಕ ಪುಷ್ಪಗಳು ವೀಕ್ಷಕರ ಗಮನ ಸೆಳೆಯುತ್ತಿದೆ. ಮಹಾರಾಷ್ಟ್ರ ಮತ್ತು ಅಸ್ಸಾಂನಿಂದಲೂ ವಿಶೇಷವಾದ ಹೂಗಗಳನ್ನು ಲಾಲ್ ಬಾಗ್ ನಲ್ಲಿ ಪ್ರದರ್ಶಿಸಲಾಗುತ್ತಿದೆ.
1912ರಲ್ಲಿ ಲಾಲ್ ಬಾಗ್ ನ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸಿದ್ದ ಹಾಗೂ ವ್ಯವಸ್ಥಾಪಕರಾಗಿದ್ದ ಜಿಎಚ್ ಕೃಂಬಿಗಲ್ ಸ್ಮರಣಾರ್ಥ ಈ ಬಾರಿ ಫ್ಲವರ್ ಶೋ ಏರ್ಪಡಿಸಲಾಗಿದೆ. ಈ ಫ್ಲವರ್ ಶೋ ಮುಖ್ಯ ಆಕರ್ಷಕ ಶೋವಾಗಿದೆ.