ಬೆಂಗಳೂರು: 108 ಆಂಬ್ಯುಲನ್ಸ್ ಸಿಬ್ಬಂದಿ ವಿರುದ್ಧ ಎಸ್ಮಾ ಜಾರಿ ಮಾಡುವುದಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.
ಇಂದು ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಎಸ್ಮಾ ಜಾರಿ ಮಾಡದೆಯೂ 108 ಸೇವೆಯನ್ನು ನಾವು ನೀಡಿದ್ದೇವೆ. ಹಲವು ಸಿಬ್ಬಂದಿ ಧರಣಿ ಕೈಬಿಟ್ಟು ಸೇವೆಗೆ ಹಾಜರಾಗಿದ್ದಾರೆ. ವಿಚಿತ್ರ ಎಂದರೆ 108 ಸಿಬ್ಬಂದಿ ಪ್ರತಿಭಟನೆಗೆ ಕಾರಣಗಳೇ ಇಲ್ಲ. ಇವರ ವೇತನ ಕೂಡ ಸರಿಯಾಗಿಯೇ ಪಾವತಿಸಲಾಗುತ್ತಿದೆ ಎಂದರು.
ಕೆಲಸಕ್ಕೆ ಮರಳಲು ಸಿಬ್ಬಂದಿಗೆ 48 ಗಂಟೆಗಳ ಗಡುವನ್ನು ಜಿವಿಕೆ ಸಂಸ್ಥೆ ನೀಡಿದೆ. ಇದರೊಳಗೆ ಅವರು ಪ್ರತಿಭಟನೆ, ಧರಣಿ ನಿಲ್ಲಿಸಿ ಸೇವೆಗೆ ಹಾಜರಾಗಬೇಕು. ಇಲ್ಲವಾದರೆ ಇವರ ಬದಲಿಗೆ ಹೊಸ ಸಿಬ್ಬಂದಿ ನೇಮಕ ಮಾಡಿಕೊಳ್ಳಲಾಗುವುದು ಎಂದು ಹೇಳಿದರು.