ಬೆಂಗಳೂರು: ಬಿಬಿಎಂಪಿ ಕಸ ವಿಂಗಡಣೆ ಅಭಿಯಾನಕ್ಕೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರಾಯಭಾರಿಯಾಗಿದ್ದಾರೆ.
ಬೆಂಗಳೂರು ಮಹಾನಗರದ ನಾಗರಿಕರಿಗೆ ಸ್ವಚ್ಛತೆ ಬಗ್ಗೆ ಅರಿವು ಮೂಡಿಸುವ ಮುದ್ರಣ ಹಾಗೂ ವಿಡಿಯೋ ಜಾಹೀರಾತು, ಅಭಿಯಾನದಲ್ಲಿ ಸಂಭಾವನೆ ಪಡೆಯದೆ ಭಾಗವಹಿಸಲು ಪುನೀತ್ ರಾಜ್ ಕುಮಾರ್ ಒಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬೆಂಗಳೂರು ನಗರದಲ್ಲಿ ತ್ಯಾಜ್ಯ ಸಮಸ್ಯೆಗೆ ಪರಿಹಾರಕ್ಕಾಗಿ ಮನೆಗಳಿಂದ ಹಸಿ ಹಾಗೂ ಒಣ ತ್ಯಾಜ್ಯ ಬೇರ್ಪಡಿಸಿ ಸಂಗ್ರಹಿಸಲು 2013ರಲ್ಲಿ ಆಯುಕ್ತ ರಜನೀಶ್ ಗೋಯಲ್ ಆದೇಶಿಸಿದ್ದರು.