News Kannada
Tuesday, July 05 2022

ಬೆಂಗಳೂರು ನಗರ

ದುಬಾರಿ ವಾಚ್ ರಹಸ್ಯ ಹೇಳಿದ ಹೆಚ್ ಡಿಕೆ - 1 min read

Photo Credit :

ದುಬಾರಿ ವಾಚ್ ರಹಸ್ಯ ಹೇಳಿದ ಹೆಚ್ ಡಿಕೆ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಇರುವ ದುಬಾರಿ ಬೆಲೆಯ ಹೂಬ್ಲಾಟ್ ವಾಚ್ ಬಗೆಗಿನ ಜಿದ್ದಾಜಿದ್ದಿ ತಾರಕ್ಕೇರಿದೆ.


ಈ ಕುರಿತಂತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ, ವಾಚ್ ಕುರಿತಂತೆ ಸಿಐಬಿ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ. ವಾಚ್ ನ ಕುರಿತು ಹಲವು ಸ್ಪೋಟಕ ಮಾಹಿತಿ ಬಹಿರಂಗಪಡಿಸಿದ ಅವರು ಪ್ರಭಾವಿ ಅಧಿಕಾರಿಗಳು ಕಳ್ಳತನವಾದ ಎರಡು ವಾಚುಗಳನ್ನು ವಶಪಡಿಸಿಕೊಂಡು, ದಾಖಲೆಗಳನ್ನು ನಾಶಪಡಿಸಿ ಆ ಪೈಕಿ ಒಂದು ವಾಚ್ ಅನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಕೊಟ್ಟಿರುವ ಶಂಕೆ ಇದೆ ಎಂದರು.

ಮಂಗಳೂರು ಮೂಲದ ಸುಧಾಕರ್ ಶೆಟ್ಟಿ ಎಂಬುವವರು ದುಬೈನಲ್ಲಿ ನೆಲೆಸಿದ್ದರು. ನಂತರ ಬೆಂಗಳೂರಿಗೆ ವಾಸ್ತವ್ಯ ಬದಲಿಸಿದ್ದ ಅವರ ಅಪಾರ್ಟ್ ಮೆಂಟ್ನಲ್ಲಿ ವಾಚು ಮತ್ತು ಉಂಗುರಗಳು ಕಳುವಾಗಿದ್ದವು. ಈ ಬಗ್ಗೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು. ಆದರೆ ಈ ವಾಚುಗಳು ಸಿಕ್ಕ ಕುರಿತೂ ಮಾಹಿತಿ ಇಲ್ಲ. ಹೀಗಾಗಿ ಅದಕ್ಕೂ ಈ ವಾಚಿಗೂ ಸಂಬಂಧವಿದೆ ಎಂಬ ಶಂಕೆ ಇದೆ ಎಂದರು.

ಇದಾದ ನಂತರ ಸುಧಾಕರ ಶೆಟ್ಟಿಯವರು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ದೂರು ನೀಡಿ, ತಮ್ಮ ಮನೆಗೆ ಡ್ರೈವರ್ ಆನಂದ್, ಮಹಾಲಕ್ಷ್ಮಿ ಎಂಬ ಕೆಲಸದವಳು ಹಾಗೂ ಯಶೋಧಾ ಎಂಬ ಬ್ಯೂಟಿ ಪಾರ್ಲರ್ ಮಾಲಕಿ ಬಿಟ್ಟರೆ ಬೇರೆ ಯಾರೂ ಬರಲು ಸಾಧ್ಯವಿಲ್ಲ. ಹೀಗಾಗಿ ಮೂವರ ಪೈಕಿ ಯಾರೋ ಕದ್ದಿರಬೇಕು. ಹುಡುಕಿಸಿಕೊಡಿ ಎಂದು ವಿವರಿಸುತ್ತಾರೆ. ಆದರೆ ಇದುವರೆಗೆ ಆ ವಾಚು, ಉಂಗುರಗಳು ಸಿಕ್ಕಿವೆಯೇ? ಎಂಬುದರ ವಿವರ ಬಹಿರಂಗವಾಗಬೇಕು ಎಂದ ಅವರು, ಕೆಲ ದಿನಗಳ ಹಿಂದೆ ಬೀದರ್ ನಿಂದ ನಾನು ಬೆಂಗಳೂರಿಗೆ ಬರುವಾಗ ನನ್ನ ಪರಿಚಿತರೊಬ್ಬರು, ಸುಧಾಕರ್ ಶೆಟ್ಟಿಯವರು ಮುಖ್ಯಮಂತ್ರಿಗಳ ಕೈಲಿದ್ದ ವಾಚನ್ನು ನೋಡಿ, ಇದು ನನ್ನದು ಎಂದರು. ಈ ಬಗ್ಗೆ ವಿವರ ನೀಡಲು ಅವರು ನಂತರದ ಎರಡು ದಿನಗಳ ಕಾಲ ತಯಾರಿದ್ದರು. ಆದರೆ ನಾನು ಕಾರ್ಯಭಾರದ ಒತ್ತಡದಲ್ಲಿದ್ದೆ. ಆದರೆ ಎರಡು ದಿನಗಳ ನಂತರ ಕೇಳಿದರೆ ಸುಧಾಕರ ಶೆಟ್ಟಿ ಈ ವ್ಯವಹಾರವೇ ನನಗೆ ಬೇಕಿಲ್ಲ ಎಂದು ನಾಪತ್ತೆಯಾಗಿದ್ದಾರೆ.

ಈ ಮಧ್ಯೆ ಪೊಲೀಸರಿಂದ ತನಿಖೆಗೊಳಗಾದ ಸುಧಾಕರ ಶೆಟ್ಟಿಯವರ ಕಾರ್ ಡ್ರೈವರ್ ಆನಂದ ವಿಚಾರಣೆಗೊಳಗಾಗಿದ್ದಾನೆ. ಆತ ಹೇಳುವ ಪ್ರಕಾರ, ಬ್ಯೂಟಿ ಪಾರ್ಲರ್ ಮಾಲಕಿ ಯಶೋಧಾ ಮನೆಗೆ ಬಂದು ಕೆಲಸ ಮುಗಿಸಿ, ಮಂಗಳೂರಿಗೆ ಹೋಗುವುದಾಗಿ ಹೇಳಿದ್ದಳು. ಆದರೆ ಮರುದಿನ ಆಕೆ ಕೆ.ಆರ್.ನಗರಕ್ಕೆ ಹೋಗಿದ್ದಳು ಎಂಬುದು ಪತ್ತೆಯಾಯಿತು ಎಂದು ಹೇಳಿದ್ದಾನೆ. ಹೀಗೆ ಇಡೀ ಪ್ರಕರಣವನ್ನು ನೋಡಿದರೆ ಪ್ರಭಾವಿ ಪೊಲೀಸರ ಪಾತ್ರ ಇದರಲ್ಲಿದೆ ಎಂಬ ಶಂಕೆ ಮೂಡುತ್ತದೆ ಎಂದು ಕುಮಾರ ಸ್ವಾಮಿ ಹೇಳಿದ್ದಾರೆ.

ಒಟ್ಟಾರೆ ಪ್ರಕರಣ ಎಲ್ಲಿಂದ ಮತ್ತೆಲ್ಲಿಗೋ ಹೋಗುತ್ತಿದ್ದು ಮುಂದಿನ ದಿನಗಳಲ್ಲಿ ಇದು ಯಾವ ರೀತಿಯ ತಿರುವು ಪಡೆಯುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

See also  ಪೊಲೀಸ್ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ: ಮೂವರ ಬಂಧನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು