ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟಿದ್ದ ಸ್ಪೈಸ್ ಜೆಟ್ ವಿಮಾನವೊಂದ ಟಯರ್ ಏಕಾಏಕಿ ಕಳಚಿ ಬಿದ್ದರೂ ಫೈಲೆಟ್ ಗಳ ಸಮಯ ಪ್ರಜ್ಞೆಯಿಂದ ಸುಮಾರು 211 ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಸಂಜೆ 5ರ ವೇಳೆ ಬೆಂಗಳೂರಿನಿಂದ ಕೋಲ್ಕತ್ತಾಕ್ಕೆ ತೆರಳುತ್ತಿದ್ದ ಸ್ಪೈಸ್ ಜೆಟ್ ವಿಮಾನ ಹಾರುವ ವೇಳೆ ಏಕಾಏಕಿ ವೇಳೆ ಟಯರ್ ಕಳಚಿ ಬಿದ್ದಿದೆ. ಇದು ವಿಮಾನ ಸಿಬ್ಬಂದಿ ಗಮನಕ್ಕೆ ಬಂದಿಲ್ಲ. ಆದರೆ ಕೋಲ್ಕತ್ತಾದಲ್ಲಿ ವಿಮಾನ ಇಳಿಯುವ ವೇಳೆ ಟಯರ್ ಇಲ್ಲದಿರುವುದನ್ನು ಗಮನಿಸಲಾಗಿದೆ.
ನಂತರ ಪೈಲೆಟ್ ಗಳು ವಿಮಾನವನ್ನು ಸುರಕ್ಷಿತವಾಗಿ ಕೆಳಗಿಳಿಸಿದ್ದಾರೆ. ವಿಮಾನದಲ್ಲಿ 204 ಪ್ರಯಾಣಿಕರು ಸೇರಿದಂತೆ 211 ಮಂದಿ ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ. ಸೂಕ್ತ ಮುನ್ನೆಚ್ಚರಿಕೆ ಕ್ರಮ ಇಲ್ಲವಾದ್ದರಿಂದ ಈ ಘಟನೆ ನಡೆದಿದೆ.
ಒಂದು ವೇಳೆ ವಿಮಾನವೇನಾದರೂ ಹಾಗೇ ಲ್ಯಾಂಡ್ ಆಗಿದ್ದರೆ ದೊಡ್ಡದಂದು ದುರಂತ ಸಂಭವಿಸುವ ಎಲ್ಲಾ ಸಾಧ್ಯತೆಗಳು ಇತ್ತೆಂದು ಹೇಳಲಾಗಿದೆ. ಸದ್ಯ ವಿಮಾನದಲ್ಲಿ ಟಯರ್ ಇಲ್ಲ ತಿಳಿದು ಆತಂಕದಲ್ಲಿದ್ದ ಪ್ರಯಾಣಿಕರು ನಿಟ್ಟುಸಿರು ಬಿಡುವಂತಾಗಿದೆ