News Kannada
Saturday, October 01 2022

ಬೆಂಗಳೂರು ನಗರ

ಮಗನ ಸಾವಿನ ನ್ಯಾಯಕ್ಕಾಗಿ ಆಗ್ರಹಿಸಿ ಪ್ರತಿಭಟನೆ: ಕುಸಿದು ಬಿದ್ದ ಡಿಕೆ ರವಿ ತಾಯಿ - 1 min read

Photo Credit :

ಮಗನ ಸಾವಿನ ನ್ಯಾಯಕ್ಕಾಗಿ ಆಗ್ರಹಿಸಿ ಪ್ರತಿಭಟನೆ: ಕುಸಿದು ಬಿದ್ದ ಡಿಕೆ ರವಿ ತಾಯಿ

ಬೆಂಗಳೂರು: ಮಗನ ಸಾವಿನ ನ್ಯಾಯಕ್ಕಾಗಿ ಆಗ್ರಹಿಸಿ ಇಲ್ಲಿನ ಗಾಂಧಿ ಗಾಂಧಿಪ್ರತಿಮೆ ಬಳಿ ಅಹೋರಾತ್ರಿ ಧರಣಿ ನಡೆಸುತ್ತಿದ್ದ ಸಂದರ್ಭ ಡಿಕೆ ರವಿ ತಾಯಿ ಗೌರಮ್ಮ ಕುಸಿದು ಬಿದ್ದಿದ್ದಾರೆ.


ಪ್ರತಿಭಟನೆ ಸಂದರ್ಭ ಕುಸಿದು ಬಿದ್ದ ಡಿಕೆ ರವಿ ತಾಯಿ ಗೌರಮ್ಮ ಪ್ರಥಮ ಚಿಕಿತ್ಸೆ ನೀಡಲಾಗಿದ್ದು ಚೇತರಿಸಿಕೊಂಡಿದ್ದಾರೆ. ಪೊಲೀಸರು ಮತ್ತು ಸರ್ಕಾರ ನಮ್ಮ ಹೋರಾಟಕ್ಕೆ ಅಡ್ಡಿ ಮಾಡುತ್ತಿದ್ದು ಪ್ರತಿಭಟನೆಯನ್ನು ಕೈ ಬಿಡುತ್ತಿದ್ದೇವೆ ಎಂದು ಗೌರಮ್ಮ ತಿಳಿಸಿದ್ದಾರೆ. ಸರ್ಕಾರದಿಂದ ಬರಬೇಕಿರುವ ಪರಿಹಾರ ಹಾಗೂ ಸಿಬಿಐ ತನಿಖಾ ವರದಿ ಏಳು ದಿನಗಳಲ್ಲಿ ಕೈ ಸೇರದಿದ್ದರೆ ಮಗನ ಅಸ್ಥಿಪಂಜರದೊಂದಿಗೆ ವಿಧಾನಸೌಧ ಮುಂಭಾಗ ಪ್ರತಿಭಟನೆ ನಡೆಸುವುದಾಗಿ ಡಿ.ಕೆ. ರವಿ ತಾಯಿ ಗೌರಮ್ಮ ಎಚ್ಚರಿಕೆ ನೀಡಿದ್ದಾರೆ.

ಸರ್ಕಾರದ ಪರವಾಗಿ ಮನವಿ ಸ್ವೀಕರಿಸಲು ಆಗಮಿಸಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಬಳಿಯೂ ಅಸಮಾಧಾನ ತೋಡಿಕೊಂಡ ಅವರು, ಮಗನನ್ನು ಕಳೆದುಕೊಂಡ ಮೇಲೆ ಕುಟುಂಬ ನಿರ್ವಹಣೆ ಕಷ್ಟವಾಗಿದೆ. ತುತ್ತು ಅನ್ನಕ್ಕೂ ಪರದಾಡುವಂತಾಗಿದೆ ಎಂದು ಹೇಳಿದರು.

See also  ಹಿಜಾಬ್ ವಿವಾದ ಮುಂದುವರೆಸದೆ ಇಲ್ಲಿಗೆ ಪೂರ್ಣ ವಿರಾಮ ಹಾಕಿ; ಬಿ.ಎಸ್.ಯಡಿಯೂರಪ್ಪ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು