News Kannada
Saturday, October 01 2022

ಬೆಂಗಳೂರು ನಗರ

ಮಳೆಯಿಂದಾಗಿ ಬೆಂಗಳೂರಿಗರಿಗೆ ಕೊಂಚ ಸಮಾಧಾನ - 1 min read

Photo Credit :

ಮಳೆಯಿಂದಾಗಿ ಬೆಂಗಳೂರಿಗರಿಗೆ ಕೊಂಚ ಸಮಾಧಾನ

ಬೆಂಗಳೂರು: ನಗರದಲ್ಲಿ ಗುರುವಾರ ರಾತ್ರಿ ಸುರಿದ ಮಳೆಯಿಂದಾಗಿ ಸ್ವಲ್ಪ ಸಮಾಧಾನ ಮೂಡಿಸಿದೆ. ಮಧ್ಯಾಹ್ನ ಮತ್ತು ಸಂಜೆಯ ವೇಳೆಗೆ ಹಲವೆಡೆ ಮಳೆ ಬಿದ್ದಿದ್ದು, ಇದರೊಂದಿಗೆ ಮೋಡ ಕವಿದ ವಾತಾವರಣ ಇದ್ದುದರಿಂದ ಬೇಸಿಗೆ ಬಿಸಿಯ ಅನುಭವ ಕಡಿಮೆಯಾಯಿತು.

ನಗರ ಹೊರವಲಯ ದೇವನಹಳ್ಳಿ, ಬಾಗಲಗುಂಟೆ, ಆನೇಕಲ್ ಹಾಗೂ ಬೆಂ.ಪೂರ್ವ ಭಾಗದ ಪುಲಕೇಶಿನಗರ, ಬಾಣಸವಾಡಿ ಸುತ್ತಮುತ್ತ ಧಾರಕಾರ ಮಳೆಯಾಗಿದೆ. ಸಾಮಾನ್ಯವಾಗಿ ಜೂ.1 ಕ್ಕೆ ಮುಂಗಾರು ಕೇರಳ ಪ್ರವೇಶಿಸಿ, ಎರಡ್ಮೂರು ದಿನಗಳಲ್ಲಿ ರಾಜ್ಯ ಪ್ರವೇಶಿಸಲಿದೆ. ಅಂತೆಯೇ ಈ ಬಾರಿ ಮುಂಗಾರು ತಡ ಮಾಡದೆ ಸರಿಯಾದ ಸಮಯಕ್ಕೆ ರಾಜ್ಯ ಪ್ರವೇಶಿಸಲಿದೆ. ಕಳೆದ ವರ್ಷ ಜೂ.9 ಕ್ಕೆ ಮುಂಗಾರು ಪ್ರವೇಶಿಸಿತ್ತು. ಮಳೆಗಾಲದಲ್ಲಿ ಉತ್ತಮ ಮಳೆಯಾಗದೇ ಸಮಸ್ಯೆ ಆಗಿತ್ತು. ಆದರೆ ಈ ವರ್ಷ ಬೇಸಿಗೆ ಕಾಲದಲ್ಲಿ ದಾಖಲೆ ಮಟ್ಟದ ಉಷ್ಣಾಂಶವಿದ್ದ ಕಾರಣ ವಾತಾವರಣದಲ್ಲಿ ತಾಪಮಾನ ಹೆಚ್ಚಾಗಿದ್ದು, ಸರಾಸರಿಗಿಂತ ಅಧಿಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.  ಈಗಿನ ಮುನ್ಸೂಚನೆಯಂತೆ ಶುಕ್ರವಾರ ನಗರದ ಕೆಲ ಕಡೆ ಮಳೆ ಬೀಳುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಸಿಬ್ಬಂದಿ ಹೇಳಿದ್ದಾರೆ.

See also  ಚಾಕುವಿನಿಂದ ಪತ್ನಿಯ ಕುತ್ತಿಗೆ ಕೊಯ್ದು, ಆತ್ಮಹತ್ಯೆಗೆ ಯತ್ನಿಸಿದ ಪತಿ !
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು