News Kannada
Thursday, October 06 2022

ಬೆಂಗಳೂರು ನಗರ

ಪೊಲೀಸ್ ಸಮವಸ್ತ್ರ ಧರಿಸಿ ಪಿಜಿ ಮಾಲಿಕರಿಗೆ ಬೆದರಿಸಿ ಹಣ ವಸೂಲಿ: ನಕಲಿ ಸಬ್ ಇನ್ಸ್​ಪೆಕ್ಟರ್ ನ ಬಂಧನ - 1 min read

Photo Credit :

ಪೊಲೀಸ್ ಸಮವಸ್ತ್ರ ಧರಿಸಿ ಪಿಜಿ ಮಾಲಿಕರಿಗೆ ಬೆದರಿಸಿ ಹಣ ವಸೂಲಿ:  ನಕಲಿ ಸಬ್ ಇನ್ಸ್​ಪೆಕ್ಟರ್ ನ ಬಂಧನ

ಬೆಂಗಳೂರು: ಪೊಲೀಸ್ ಸಮವಸ್ತ್ರವನ್ನು ಧರಿಸಿಕೊಂಡು ಪೈಯಿಂಗ್ ಗೆಸ್ಟ್ ಮಾಲೀಕರಿಗೆ ಬೆದರಿಸಿ ಹಣ ವಸೂಲಿ ಮಾಡತ್ತಿದ್ದ ನಕಲಿ ಸಬ್ ಇನ್ಸ್​ಪೆಕ್ಟರ್ ರನ್ನು ಪೊಲೀಸರು ಬಂಧಿಸಿದ್ದಾರೆ.

ಕೋಲಾರ ಜಿಲ್ಲೆ ಮುಳಬಾಗಿಲಿನ ಪ್ರದೀಪ್ (25) ಬಂಧಿತ ಯುವಕ. ಎಸ್ಸೈ ಆಗಬೇಕೆಂಬ ಮನದಾಸೆಯನ್ನು ಕಂಡಿದ್ದ ಈತ ಎಸ್ಸೈ ನೇಮಕಾತಿ ಪರೀಕ್ಷೆಯನ್ನು ಬರೆದಿದ್ದ. ಆದರೆ ಆಯ್ಕೆಯಾಗಿರಲಿಲ್ಲ. ಪೋಷಕರಿಗೆ, ಸ್ನೇಹಿತರಿಗೆ ಹೂಗೂ ಊರಿನ ಜನರಿಗೆ ತಾನು ಎಸ್ಸೈ ಕೆಲಸಕ್ಕೆ ಆಯ್ಕೆಯಾಗಿದ್ದೇನೆ ಎಂದು ಸುಳ್ಳು ಹೇಳಿದ್ದ. ಎಸ್ಸೈ ತರಬೇತಿಗೆ ಹೋಗುತ್ತಿರುವುದಾಗಿ ಪಾಲಕರಿಗೆ ಹೇಳಿ ನಗರದ ಪೇಯಿಂಗ್ ಗೆಸ್ಟ್ ವೊಂದರಲ್ಲಿ ವಾಸವಾಗಿದ್ದನು. ಪಿಜಿಯಲ್ಲಿ ತಾನು ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಎಂದು ಹೇಳಿ ಸಮವಸ್ತ್ರ ಧರಿಸಿಕೊಂಡು ಹೋಗುತ್ತಿದ್ದ. ಎಲ್ಲರೂ ಈತನ ಮಾತನ್ನು ನಂಬಿದ್ದರು. ಪೊಲೀಸ್ ಡ್ರೆಸ್ ಧರಿಸಿ ಬೆಳಗ್ಗೆ ಹೊರಡುತ್ತಿದ್ದ ಪ್ರದೀಪ್, ಪಿಜಿ ಮಾಲೀಕರು, ಅಂಗಡಿಗಳು, ಫುಟ್​ಪಾತ್ ವ್ಯಾಪಾರಿಗಳನ್ನು ಹೆದರಿಸಿ ಹಫ್ತಾ ವಸೂಲಿ ಮಾಡುತ್ತಿದ್ದ. ಭಟ್ಟರಹಳ್ಳಿ ಸುತ್ತಮುತ್ತಲ ಜನರಿಗೆ ತಾನು ಹಲಸೂರು ಠಾಣೆ ಎಸ್ಸೈ ಎಂದು ಹೇಳುತ್ತಿದ್ದ. ಬೇರೆ ಪ್ರದೇಶಕ್ಕೆ ಹೋದಾಗ ಕೆ.ಆರ್. ಪುರ ಠಾಣೆ ಎಸ್ಸೈ ಎಂದು ಪರಿಚಯಿಸಿಕೊಳ್ಳುತ್ತಿದ್ದ.

ಪಿಜಿ ಯಲ್ಲಿ ಅನೈತಿಕ ಚಟುವಟಿಕೆ ನಡೆಸುತ್ತದ್ದೀರಾ ಎಂದು ಬೆದರಿಸಿ ಹಣ ವಸೂಲಿ ಮಾಡುತ್ತಿದ್ದ.  ಈತನ ವರ್ತನೆಯ ಮೇಲೆ ಅನುಮಾನಗೊಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದರು. ಕೂಡಲೇ ಪೊಲೀಸರು ಆತನನ್ನು ಹಿಡಿದು ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದಾನೆ. ಬಂಧಿತ ನಕಲಿ ಪೊಲೀಸ್ ಇನ್ಸ್ ಪೆಕ್ಟರ್ ಪ್ರದೀಪ್ ಗೆ ನ್ಯಾಯಂಗ ಬಂಧನ ವಿಧಿಸಲಾಗಿದೆ.

See also  ಮೇ 1 ರಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೊರೋನಾ ಲಸಿಕೆ ಲಭ್ಯ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು