News Kannada
Friday, September 30 2022

ಬೆಂಗಳೂರು ನಗರ

ಬಿಪಿಎಲ್ ಕಾರ್ಡ್ ಪಡೆದ ಶ್ರೀಮಂತರ ಮಾಹಿತಿಗೆ ಬಹುಮಾನ - 1 min read

Photo Credit :

ಬಿಪಿಎಲ್ ಕಾರ್ಡ್ ಪಡೆದ ಶ್ರೀಮಂತರ ಮಾಹಿತಿಗೆ ಬಹುಮಾನ

ಬೆಂಗಳೂರು: ಬಿಪಿಎಲ್ ಪಡಿತರ ಚೀಟಿಗಳನ್ನು ಅನರ್ಹರು ಪಡೆದಿದ್ದರೆ ಅಂಥವರ ಮಾಹಿತಿ ನೀಡಿದರೆ ಮಾಹಿತಿದಾರರಿಗೆ ನಾಲ್ಕು ನೂರು ರೂಪಾಯಿ ಬಹುಮಾನ ನೀಡಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಪೂರೈಕೆ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿ ಈ ವಿಷಯ ತಿಳಿಸಿದ ಅವರು, ಬಡತನ ರೇಖೆಗಿಂತ ಮೇಲಿನ ಕುಟುಂಬದವರು ಪಡಿತರ ಚೀಟಿಗಾಗಿ ಇನ್ನು ಮುಂದೆ ಅಲೆಯಬೇಕಾಗಿಲ್ಲ ಮನೆಯಲ್ಲೇ ಕುಳಿತು ಎಪಿಎಲ್ ಪಡಿತರ ಚೀಟಿ ಪಡೆಯುವ ವ್ಯವಸ್ಥೆಯನ್ನು ರಾಜ್ಯ ಸರ್ಕಾರ ಜಾರಿಗೆ ತಂದಿರುವುದಾಗಿ  ಆಧಾರ್ ಕಾರ್ಡ್ ಇದ್ದರೆ ಅದರ ಸಂಖ್ಯೆಯನ್ನು ಆಹಾರ ಇಲಾಖೆ ವೆಬ್ ಸೈಟ್ ನಲ್ಲಿ ಪ್ರಕಟಿಸುವ ಅರ್ಜಿ ನಮೂನೆಯಲ್ಲಿ ದಾಖಲಿಸಿದರೆ ಸಾಕು. ಅದು ಎಪಿಎಲ್ ಪಡಿತರ ಚೀಟಿಯಾಗಿ ಮಾರ್ಪಡುತ್ತದೆ ಎಂದರು.

ಎಪಿಎಲ್ ಚೀಟಿಯ ಪ್ರತಿಯನ್ನು ಮನೆಯಲ್ಲಿ ಕುಳಿತೇ ಪಡೆಯಬಹುದು. ಅಥವಾ ಸಮೀಪದ ಯಾವುದೇ ಕಂಪ್ಯೂಟರ್ ಸೆಂಟರ್ ಗೆ ಹೋಗಿ ಪಡೆಯಬಹುದು. ಬಿಪಿಎಲ್ ಪಡಿತರ ಚೀಟಿಗಳನ್ನು ಕ್ರಮ ಬದ್ಧಗೊಳಿಸಲು ಆಧಾರ್ ಕಾರ್ಡ್ ಗಳನ್ನು ಜೋಡಿಸಲಾಗುತ್ತಿದೆ. ಈಗಾಗಲೇ ಶೇಕಡಾ 87 ರಷ್ಟು ಮಂದಿ ಆಧಾರ್ ಕಾರ್ಡ್ ಗಳನ್ನು ಪಡಿತರ ಚೀಟಿಗೆ ಲಿಂಕ್ ಮಾಡಿದ್ದು, ಆ ಪೈಕಿ ಶೇಕಡಾ 76 ರಷ್ಟು ಕಾರ್ಡ್ ಗಳು ಹೊಂದಿಕೆಯಾಗಿವೆ.

ಆಧಾರ್ ಕಾರ್ಡ್ ಗಳನ್ನು ಒದಗಿಸಲು ಜೂನ್ ಹದಿನೈದರವರೆಗೆ ಕಾಲಾವಕಾಶ ನೀಡಲಾಗಿತ್ತು. ಇದನ್ನು ಜೂನ್ ಅಂತ್ಯದವರೆಗೆ ವಿಸ್ತರಿಸಲಾಗಿದೆ ಎಂದು ಹೇಳಿದರು. ಆಧಾರ್ ಕಾರ್ಡ್ ಗಳನ್ನು ಲಿಂಕ್ ಮಾಡುವ ಪ್ರಕ್ರಿಯೆ ತಿಂಗಳಲ್ಲಿ ಪೂರ್ಣಗೊಳ್ಳಲಿದ್ದು ಇದರಿಂದಾಗಿ ಬಹುತೇಕ ನಕಲಿ ಬಿಪಿಎಲ್ ಪಡಿತರ ಚೀಟಿಗಳು ರದ್ದಾಗಲಿವೆ. ಆ ನಂತರ ಶ್ರೀಮಂತರು, ಅನರ್ಹರು ಇಂತಹ ಕಾರ್ಡ ಗಳನ್ನು ಪಡೆದ ಕುರಿತು ಪರಿಶೀಲನೆ ನಡೆಸುವುದು ಸುಲಭವಾಗಲಿದೆ ಎಂದರು.

ಗ್ರಾಮಾಂತರ ಪ್ರದೇಶಗಳಲ್ಲಿರುವ ನ್ಯಾಯಬೆಲೆ ಅಂಗಡಿಗಳಿಗೆ 300 ಹಾಗೂ ನಗರ ಪ್ರದೇಶಗಳಲ್ಲಿರುವ ನ್ಯಾಯಬೆಲೆ ಅಂಗಡಿಗಳಿಗೆ 500 ಪಡಿತರ ಚೀಟಿಗಳಿಗೆ ಆಹಾರ ಧಾನ್ಯ ಒದಗಿಸಲು ಸೂಚಿಸಲಾಗಿತ್ತು. ಆದರೆ ಈ ಪ್ರಮಾಣವನ್ನು ಅನುಕ್ರಮವಾಗಿ 500 ಹಾಗೂ 800ಕ್ಕೆ ಹೆಚ್ಚಿಸಲಾಗಿದೆ ಎಂದರು.

See also  ಇದು ʼಸೋಂಕಿನ ಸಮಾರಾಧನೆʼಯಷ್ಟೇ ಹೊರತು ಹೋರಾಟವಲ್ಲ:ಹೆಚ್.ಡಿ.ಕುಮಾರಸ್ವಾಮಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು