News Kannada
Sunday, September 25 2022

ಬೆಂಗಳೂರು ನಗರ

ಬೀದಿಗೆ ಬಂದ ಬಿಜೆಪಿ ಮಾಜಿ ಶಾಸಕ ಕೌಟುಂಬಿಕ ಕಳಹ - 1 min read

Photo Credit :

 ಬೀದಿಗೆ ಬಂದ ಬಿಜೆಪಿ ಮಾಜಿ ಶಾಸಕ ಕೌಟುಂಬಿಕ ಕಳಹ

ಬೆಂಗಳೂರು: ಬಿಜೆಪಿಯ ಮಾಜಿ ಶಾಸಕ ಹಾಗೂ ಆತನ ಪತ್ನಿ ನಡುವಿನ ಜಗಳ ಬೀದಿಗೆ ಬಂದಿದ್ದು, ನಡುರಸ್ತೆಯಲ್ಲೇ ಪತ್ನಿ ಮೇಲೆ ಹಲ್ಲೆ ನಡೆಸಿದ ಘಟನೆ ಗುರುವಾರ ನಡೆದಿದೆ.

Pati, Patni Aur Woh: Wife alleges former BJP MLA of extra marital affair-1ಮೂಡಿಗೆರೆ ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರು ಮನೆಗೆ ಬನ್ನಿ ಅಂತ ಕರೆಯಲು ಬಂದಿದ್ದ ತಮ್ಮ ಪತ್ನಿ ಸವಿತಾ ಅವರಿಗೆ ನಡುರಸ್ತೆಯಲ್ಲೇ ಥಳಿಸಿ ರಂಪಾಟ ಮಾಡಿದ್ದಾರೆ. ಕಳೆದ ಆರು ತಿಂಗಳಿಂದ ಮನೆಗೆ ಬಾರದ ಕುಮಾರಸ್ವಾಮಿಯನ್ನು ಪತ್ನಿ ಮನೆಗೆ ಕರೆಯಲು ಶಾಸಕರ ಭವನಕ್ಕೆ ಆಗಮಿಸಿದ್ದರು. ಇದರಿಂದ ಆಕ್ರೋಶಗೊಂಡ ಮಾಜಿ ಶಾಸಕ ಪತ್ನಿ ಮೇಲೆ ಹಲ್ಲೆ ನಡೆಸಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಶಾಸಕರ ಭವನ ಪೊಲೀಸ್ ಠಾಣೆ ಪೊಲೀಸರು ಪತಿ, ಪತ್ನಿ ಇಬ್ಬರನ್ನು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸುತ್ತಿದ್ದಾರೆ.

ಕುಮಾರಸ್ವಾಮಿ ಪತ್ನಿ ಸವಿತಾ, ನನ್ನ ಪತಿ ಏನೇ ಆಗಿದ್ದರೂ ಸಹಿಸಿಕೊಳ್ಳಲು ನಾನು ಸಿದ್ಧ. ನನಗೆ ಗಂಡ ಬೇಕು. ನಾನು ಅವರ ವಿರುದ್ಧ ದೂರು ದಾಖಲಿಸಲ್ಲ ಆದರೆ ಅವರನ್ನು ಮನೆಗೆ ಕರೆದೊಯ್ಯಲು ಸಹಕರಿಸಿ ಎಂದು ಮನವಿ ಮಾಡಿದ್ದಾರೆ.  ಕುಮಾರಸ್ವಾಮಿ ಪರಸ್ತ್ರೀ ಜತೆ ಸಂಬಂಧ ಹೊಂದಿದ್ದು, ಪೋನಿನಲ್ಲಿ ಮಾತನಾಡುತ್ತಿರುವ ಆಡಿಯೋ ವಾಟ್ಸಪ್ ನಲ್ಲಿ ಹರಿದಾಡುತ್ತಿದ್ದು, ಇದರಿಂದ ಪತಿ- ಪತ್ನಿ ನಡುವೆ ಕಳಹ ಉಂಟಾಗಿದೆ. ಎಂಟು ವರ್ಷದ ಹಿಂದೆ ಕುಮಾರಸ್ವಾಮಿ ಪತ್ನಿ ಸವಿತಾರನ್ನು ಪ್ರೀತಿಸಿ ಮದುವೆಯಾಗಿದ್ದರು. ಇದೇ ಸಂದರ್ಭದಲ್ಲಿ ಶಾಸಕ ಸ್ಥಾನ ಪಡೆದುಕೊಂಡಿದ್ದರು ಎಂದು ತಿಳಿದು ಬಂದಿದೆ.

See also  ಬಿಟ್‌ ಕಾಯಿನ್ ಹಗರಣ: ಬೇಲ್ ಪಡೆದು ಹೊರಬಂದ ಶ್ರೀಕಿ ನಾಪತ್ತೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು