News Kannada
Monday, October 03 2022

ಬೆಂಗಳೂರು ನಗರ

ಉಡುಪಿಯಲ್ಲಿ ಕರಾವಳಿ ಪಡೆ ತರಬೇತಿ ಅಕಾಡೆಮಿ ಸ್ಥಾಪನೆ - 1 min read

Photo Credit :

ಉಡುಪಿಯಲ್ಲಿ ಕರಾವಳಿ ಪಡೆ ತರಬೇತಿ ಅಕಾಡೆಮಿ ಸ್ಥಾಪನೆ

ಬೆಂಗಳೂರು: ಉಡುಪಿಯಲ್ಲಿ 25 ಎಕರೆ ಪ್ರದೇಶದಲ್ಲಿ ಕರಾವಳಿ ಪಡೆ ತರಬೇತಿ ಅಕಾಡೆಮಿ ಸ್ಥಾಪಿಸಲಾಗವುದು  ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗ ನಮ್ಮ ಪೊಲೀಸ್ ಪೇದೆಗಳನ್ನೇ ಕರಾವಳಿ ಪಡೆಗೆ ನೇಮಿಸಲಾಗುತ್ತಿದೆ. ಅವರಿಗೆ ಈಜು ಅದರಲ್ಲೂ ಸಮುದ್ರದಲ್ಲಿ  ಈಜುವುದು ಕಷ್ಟವಾಗುತ್ತದೆ. ಹೀಗಾಗಿ ಅಕಾಡೆಮಿ ಸ್ಥಾಪನೆ ಮಾಡಿ ಅಲ್ಲಿನವರನ್ನೇ ಪಡೆಗೆ ನೇಮಿಸಿ ಎಲ್ಲ ರೀತಿಯ ತರಬೇತಿಕೊಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಸಾಗರ ಮಾರ್ಗದಲ್ಲಿ ನಡೆಯುವ ವಿಧ್ವಂಸಕ ಕೃತ್ಯ ತಡೆಗಟ್ಟಲು ಬೋರ್ಟ್ ಕಾಲರ್ ಕೋಡಿಂಗ್ ವ್ಯವಸ್ಥೆ ಜಾರಿಗೊಳಿಸಲಾಗುವುದು. ಅಟೋಮ್ತಾಟಿಕ್ ಐಡಿಂಟಿಫಿಕೇಷನ್ ಸಿಸ್ಟಮ್ ಸಹ ಅನುಷ್ಟಾನಗೊಳಿಸಲಾಗುವುದು. ಡಿಸ್ಟ್ರೆಸ್ ರೋಮಿಂಗ್ ಸಿಸ್ಟಮ್ ಮೂಲಕ ಕರಾವಳಿಯ ಎಲ್ಲ ಕಾರ್ಯಚಟುವಟಿಕೆಗಳ ಬಗ್ಗೆ ಗಮನಹರಿಸಲಾಗುವುದು.

ಈ ಯೋಜನೆಗೆ ಕೇಂದ್ರ ಸರ್ಕಾರ 100 ಕೋಟಿ ರೂ. ಅನುದಾನ ನೀಡಲಿದೆ. ಇತ್ತೀಚೆಗೆ ಮುಂಬೈನಲ್ಲಿ ನಡೆದಿದ್ದ ಕರಾವಳಿ ಭಾಗದ ಸಚಿವರುಗಳ ಸಭೆಯಲ್ಲೂ ಈ ವಿಷಯ ಪ್ರಸ್ತಾಪಿಸಿರುವುದಾಗಿ ಹೇಳಿದರು. ಪೊಲೀಸ್ ಅಧಿಕಾರಿಗಳ ಮನೆಯಲ್ಲಿ ಪೊಲೀಸ್ ಸಿಬ್ಬಂದಿ ಕೆಲಸ ಮಾಡುವ ಆರ್ಡಲಿ ವ್ಯವಸ್ಥೆ ಸಂಪೂರ್ಣ ರದ್ದುಪಡಿಸಲು ನಿರ್ಧರಿಸಲಾಗಿದ್ದು ಸಂಪುಟ ಸಭೆಯಲ್ಲಿ ಪ್ರಸ್ತಾಪ ಇಡಲಾಗುವುದು. ಆರ್ಡಲಿ ಬದಲು ಹೊರಗುತ್ತಿಗೆ ಆಧಾರದ ಮೇಲೆ ಸಿಬ್ಬಂದಿ ನೇಮಕಕ್ಕೆ ಅವಕಾಶ ಮಾಡಿಕೊಟ್ಟು ಅವರಿಗೆ ವೇತನ ಇಲಾಖೆ ನಿಗದಿ ಮಾಡಲಿದೆ ಎಂದು ಹೇಳಿದರು.

ರಾಜಧಾನಿ ಬೆಂಗಳೂರು, ಸಾಂಸ್ಕೃತಿಕ ನಗರ ಮೈಸೂರು, ಮಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಸಂಚಾರ ದಟ್ಟಣೆ ನಿವಾರಣೆಗೆ ಯೂರೋಪ್ ಮಾದರಿ ವ್ಯವಸ್ಥೆ ಆಳವಡಿಸಿಕೊಳ್ಳಲಾಗುವುದು ಎಂದು ಇದೇ ಸಂದರ್ಭ ಹೇಳಿದರು.

See also  ಒಲಾ, ಉಬರ್ ಟ್ಯಾಕ್ಸಿ ಚಾಲಕರ ಮುಷ್ಕರ ಆರಂಭ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು