News Kannada
Friday, September 30 2022

ಬೆಂಗಳೂರು ನಗರ

ದೇಶದಲ್ಲಿಯೇ ‘ಬೆಂಗಳೂರು’ ಮೂರನೇ ಅಸುರಕ್ಷಿತ ನಗರ - 1 min read

Photo Credit :

ದೇಶದಲ್ಲಿಯೇ 'ಬೆಂಗಳೂರು' ಮೂರನೇ ಅಸುರಕ್ಷಿತ ನಗರ

ಬೆಂಗಳೂರು: ದೇಶದಲ್ಲಿಯೇ ಬೆಂಗಳೂರು ನಗರ ಮೂರನೇ ಅಸುರಕ್ಷಿತ ನಗರ ಎಂಬ ಕುಖ್ಯಾತಿಗೆ ಪಾತ್ರವಾಗಿದೆ. ದೇಶದ 53 ನಗರಗಳಲ್ಲಿ ಬೆಂಗಳೂರು ನಗರದಲ್ಲಿ ಕಳೆದ ವರ್ಷ 188 ಕೊಲೆ ಪ್ರಕರಣಗಳು ದಾಖಲಾಗಿವೆ. 

ದೆಹಲಿಯಲ್ಲಿ  464 ಮತ್ತು ಪಾಟ್ನಾದಲ್ಲಿ 232 ಪ್ರಕರಣಗಳು ದಾಖಲಾಗಿವೆ. ಬೆಂಗಳೂರಿನಲ್ಲಿ 2015ರಲ್ಲಿ 112 ಅತ್ಯಾಚಾರ ಪ್ರಕರಣಗಳು ನಡೆದಿವೆ. 777 ಅಪಹರಣ ಪ್ರಕರಣಗಳು ಬೆಂಗಳೂರಿನಲ್ಲಿ ದಾಖಲಾಗಿದ್ದರೆ, ದೆಹಲಿಯಲ್ಲಿ 6 ಸಾವಿರದ 630, ಮುಂಬೈಯಲ್ಲಿ ಸಾವಿರದ 583 ಪ್ರಕರಣಗಳು ದಾಖಲಾಗಿವೆ. ಬೆಂಗಳೂರು ನಂತರ ಕೋಲ್ಕತ್ತಾ(23 ಸಾವಿರದ 990), ಹೈದರಾಬಾದ್(16,965) ಮತ್ತು ಚೆನ್ನೈಯಲ್ಲಿ ಕಳೆದ ವರ್ಷ 13 ಸಾವಿರದ 422 ಅಪರಾಧ ಪ್ರಕರಣಗಳು ದಾಖಲಾಗಿವೆ. ಚೆನ್ನೈ ನಗರ ದೇಶದಲ್ಲಿಯೇ ಸುರಕ್ಷಿತ ನಗರ ಎಂಬ ಕೀರ್ತಿಗೆ ಪಾತ್ರವಾಗಿದೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಸಂಸ್ಥೆ ಬಿಡುಗಡೆ ಮಾಡಿರುವ ಅಂಕಿಅಂಶ ಹೇಳುತ್ತದೆ.

ಬೆಂಗಳೂರು ನಗರದಲ್ಲಿ ವರದಕ್ಷಿಣೆ ಕಿರುಕುಳ ಮತ್ತ ಸಾವಿನ ಪ್ರಕರಣಗಳು ನಡೆಯುವುದು ಹೆಚ್ಚು ಎನ್ನುತ್ತಾರೆ ಸೈಬರ್ ಕ್ರೈಮ್ ದಾಖಲೆಗಳು. ವರದಕ್ಷಿಣೆ ಕಿರುಕುಳ ಕಾಯ್ದೆಯಡಿ 714 ಕೇಸುಗಳು ದಾಖಲಾಗುತ್ತಿವೆ. ಬೆಂಗಳೂರು ನಂತರ ಜೆಮ್ ಶೆಡ್ ಪುರ(157), ಪಾಟ್ನಾ(151)ಗಳಿವೆ. ಮೆಟ್ರೋ ನಗರಗಳಲ್ಲಿ 17 ಕೇಸುಗಳು ಮತ್ತು ಚೆನ್ನೈಯಲ್ಲಿ ವರದಕ್ಷಿಣೆ ಕಿರುಕುಳಕ್ಕೆ ಸಂಬಂಧಪಟ್ಟಂತೆ 3 ಕೇಸುಗಳು ದಾಖಲಾಗಿವೆ. ಬೆಂಗಳೂರಿನಲ್ಲಿ ವರದಕ್ಷಿಣೆ ಕಿರುಕುಳಕ್ಕೆ ಸಂಬಂಧಪಟ್ಟಂತೆ 54 ಕೇಸುಗಳು ದಾಖಲಾಗಿವೆ. ಈ ವಿಷಯದಲ್ಲಿ ದೆಹಲಿ ನಂತರದ ಸ್ಥಾನದಲ್ಲಿ ಬೆಂಗಳೂರು ಇದೆ. ದೆಹಲಿಯಲ್ಲಿ ವರದಕ್ಷಿಣೆ ಕಿರುಕುಳಕ್ಕೆ ಸಂಬಂಧಪಟ್ಟಂತೆ 100 ಕೇಸುಗಳು 2015ರಲ್ಲಿ ದಾಖಲಾಗಿವೆ. ಒಟ್ಟಾಗಿ ನೋಡಿದರೆ ಬೆಂಗಳೂರು ನಗರ ದೇಶದಲ್ಲಿಯೇ ಅಸುರಕ್ಷಿತ ನಗರವಾಗಿದೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಸಂಸ್ಥೆ  ತಿಳಿಸಿದೆ.

See also  ಇಂದಿನಿಂದ ಇನ್ವೆಸ್ಟ್ ಕರ್ನಾಟಕ ಸಮಾವೇಶ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು