News Kannada
Friday, September 30 2022

ಬೆಂಗಳೂರು ನಗರ

ನಾಪತ್ತೆಯಾದ ಅಲೋಷಿಯಸ್ ವಿದ್ಯಾರ್ಥಿ: ಮೃತದೇಹ- ಬೈಕ್ ಸಮೇತ ಕೊಳೆತ ಸ್ಥಿತಿಯಲ್ಲಿ ಪತ್ತೆ - 1 min read

Photo Credit :

ನಾಪತ್ತೆಯಾದ ಅಲೋಷಿಯಸ್ ವಿದ್ಯಾರ್ಥಿ: ಮೃತದೇಹ- ಬೈಕ್ ಸಮೇತ ಕೊಳೆತ ಸ್ಥಿತಿಯಲ್ಲಿ ಪತ್ತೆ

ಉಳ್ಳಾಲ: ಸೆ.1 ರ ರಾತ್ರಿ 12 ಗಂಟೆಯಿಂದ ನಾಪತ್ತೆಯಾಗಿದ್ದ ಕೋಟೆಕಾರು ಬೀರಿ ಅಲೋಷಿಯಸ್ ಕಾಲೇಜಿನ ಎಂಬಿಎ ವಿದ್ಯಾರ್ಥಿಯ ಮೃತದೇಹ ಶುಕ್ರವಾರ ಮಾಡೂರು ಸಮೀಪ ತೋಡಿನಲ್ಲಿ ಬೈಕ್ ಸಮೇತ ಪತ್ತೆಯಾಗಿದೆ.

Missing St Aloysius college student found dead near Ullal-1ಕೇರಳದ  ತಿರುವನಂತಪುರ ನಿವಾಸಿ ಸೋನು ಸುಭಾಷ್ ಚಂದ್ರನ್ (20) ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸೆ.1 ರಂದು   ರಾತ್ರಿ ವೇಳೆ ಮಾಡೂರು ಸಮೀಪ ತಾನಿದ್ದ ಪೇಯಿಂಗ್ ಗೆಸ್ಟ್ ನಿಂದ ನಾಪತ್ತೆಯಾಗಿದ್ದರು. ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ರೂಮಿನಲ್ಲಿ ಜತೆಗಿದ್ದ ಸಹಪಾಠಿಗಳು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು.  ಆನಂತರ ಪೊಲೀಸರು, ಸಹಪಾಠಿಗಳು ಹಾಗೂ ಸಂಬಂಧಿಕರು ಸೇರಿಕೊಂಡು 9 ದಿನಗಳ ಕಾಲ ಹುಡುಕಾಟ ನಡೆಸಿದರೂ ಸೋನು ಎಲ್ಲಿಯೂ ಕಂಡುಬಂದಿರಲಿಲ್ಲ.

ಒಂಟಿಯಾಗಿ ಇರಬೇಕೆಂದು ಹೇಳಿದ್ದ: ಸೆ. 1 ರ ರಾತ್ರಿ  ರೂಮಿನಲ್ಲಿ  ಪಾರ್ಟಿ ನಡೆಸಿದ್ದ ಬಳಿಕ  ಸ್ವಲ್ಪ ಕಾಲ ಒಂಟಿಯಾಗಿ ಇರಬೇಕೆಂದು ರೂಮಿನಲ್ಲಿದ್ದ ಇತರ ಸ್ನೇಹಿತರೊಡನೆ ತಿಳಿಸಿದ್ದ.  ಆನಂತರ ಬೈಕಿನೊಂದಿಗೆ ಮಡ್ಯಾರ್ ಕಡೆಗೆ ತೆರಳಿ ಅಲ್ಲಿದ್ದ ಕಟ್ಟೆಯೊಂದರಲ್ಲಿ  ತುಂಬಾ ಹೊತ್ತು ಕುಳಿತಿದ್ದ.  ಮೊಬೈಲನ್ನು ರೂಮಿನಲ್ಲೇ ಬಿಟ್ಟು ಹೋಗಿದ್ದರಿಂದಾಗಿ ತುಂಬಾ ಹೊತ್ತಾದರೂ ಸೋನು ರೂಮಿಗೆ ಬಾರದೇ ಇದ್ದಾಗ ಆತನನ್ನು ಹುಡುಕುತ್ತಾ  ಸ್ನೇಹಿತರು ಮಡ್ಯಾರು ಕಡೆಗೆ ಬಂದಿದ್ದರು. ಆದರೆ ಅದೇ ಸಮಯದಲ್ಲಿ ಅಮಿತ ವೇಗದಲ್ಲಿ ಸೋನು ಮತ್ತೆ ಕೋಟೆಕಾರು ಬೀರಿ ಕಡೆಯತ್ತ ಬೈಕಿನಲ್ಲಿ ತೆರಳಿದ್ದನು.  ಕೂಡಲೇ ಇನ್ನೊಂದು ಬೈಕಿನಲ್ಲಿ ಸ್ನೇಹಿತರು ಆತನನ್ನು ಹಿಂಬಾಲಿಸುತ್ತಾ ತೆರಳಿ  ಬೀರಿ ಕಡೆಗೆ ಹೋದರೂ , ಸೋನು  ಪತ್ತೆಯಾಗಿರಲಿಲ್ಲ. ಆ ನಂತರ  ಸ್ನೇಹಿತರು, ಮನೆಮಂದಿಯಲ್ಲಿ ವಿಚಾರಿಸಿದ್ದರೂ ಪತ್ತೆಯಾಗಿರಲಿಲ್ಲ.

ಅಮಿತ ವೇಗ ಅಪಘಾತವಾಯಿತು !
ಅಮಿತ ವೇಗದಲ್ಲಿ ತೆರಳಿದ್ದ  ಸೋನು ಸುಭಾಷ್ ಚಂದ್ರ  ಮಾಡೂರು ಸಮೀಪದ ತಿರುವು ರಸ್ತೆಯನ್ನು ಗಮನಿಸದೆ  ನೇರವಾಗಿ ತೆರಳಿರುವುದರಿಂದ ಅಪಘಾತ ನಡೆದಿರುವ ಸಾಧ್ಯತೆಗಳಿವೆ.  ಬೈಕ್ ನೇರ  ತೋಡಿಗೆ ಉರುಳಿ ತಲೆಯ ಭಾಗಕ್ಕೆ ಗಂಭೀರ ಗಾಯವಾಗಿ ಅಲ್ಲೇ ಮೃತಪಟ್ಟಿರುವ ಶಂಕೆ ಇದೆ. ತಡರಾತ್ರಿ ಘಟನೆ ಸಂಭವಿಸಿ, ಹಾಗೂ ಆತ ಬಿದ್ದ ಜಾಗದಲ್ಲಿ ಗಿಡಗಂಟೆಗಳು ಆವರಿಸಿದ್ದರಿಂದಾಗಿ  9 ದಿನಗಳಾದರೂ  ಮೃತದೇಹ  ಯಾರ ಗೋಜಿಗೂ ಬಂದಿರಲಿಲ್ಲ. ಅಲ್ಲದೇ  ಘಟನೆ ನಡೆದ ಸ್ಥಳದಲ್ಲೇ  ಕಸದ ರಾಶಿ ತುಂಬಿ ಅದರಿಂದ ದುರ್ವಾಸನೆ ಬರುತ್ತಿದ್ದರಿಂದಾಗಿ  ಮೃತದೇಹ ಕೊಳೆತು ದುವರ್ಾಸನೆ ಬೀರುತ್ತಿದ್ದರೂ  ದಿನದಲ್ಲಿ ಸಂಚರಿಸುವ  ನೂರಾರು ವಾಹನ ಸವಾರರಿಗೆ ಬೈಕಾಗಲಿ,  ಮೃತದೇಹವಾಗಲಿ ಕಂಡುಬಂದಿರಲಿಲ್ಲ.

ಆಡು ಮೇಯಿಸುವವರಿಂದ ಪತ್ತೆ:  ಮಾಡೂರು ಸಮೀಪ ಆಡು ಸಾಕುತ್ತಿರುವ ಇಸ್ಮಾಯಿಲ್  ಎಂಬವರು ಸಂಜೆ ವೇಳೆ ಆಡು ಮೇಯಿಸುವ ಸಂದರ್ಭ ತೋಡಿನಲ್ಲಿ ಬೈಕ್ ಪತ್ತೆಯಾಗಿತ್ತು. ಗಿಡಗಂಟೆಗಳನ್ನು ತೆರೆದು ಮತ್ತೆ ನೋಡಿದಾಗ ವಿದ್ಯಾರ್ಥಿ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು.   ಬಳಿಕ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಸ್ಥಳಕ್ಕೆ ಎಸಿಪಿ  ಶೃತಿ,  ಉಳ್ಳಾಲ ಠಾಣಾಧಿಕಾರಿ ಶಿವಪ್ರಕಾಶ್, ಕೊಣಾಜೆ ಠಾಣಾಧಿಕಾರಿ  ಅಶೋಕ್  ಸಹಿತ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

See also  7ನೇ ತರಗತಿಯವರಿಗೆ ಪಬ್ಲಿಕ್ ಪರೀಕ್ಷೆ ಬದಲು ಸಾಮಾನ್ಯ ಮೌಲ್ಯಾಂಕನ ಪರೀಕ್ಷೆ

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು