News Kannada
Wednesday, October 05 2022

ಬೆಂಗಳೂರು ನಗರ

ಜರ್ಮನಿಯ ಬವೇರಿಯನ್ ರಾಜ್ಯದ ಐವರು ಪೊಲೀಸ್ ಅಧಿಕಾರಿಗಳ ತಂಡ ಮೈಸೂರಿಗೆ ಆಗಮನ - 1 min read

Photo Credit :

ಜರ್ಮನಿಯ ಬವೇರಿಯನ್ ರಾಜ್ಯದ ಐವರು ಪೊಲೀಸ್ ಅಧಿಕಾರಿಗಳ ತಂಡ ಮೈಸೂರಿಗೆ ಆಗಮನ

ಮೈಸೂರು: ಬವೇರಿಯನ್ ರಾಜ್ಯದ ತರಬೇತಿ ಇಲಾಖೆ ಆಯುಕ್ತ ವೋಲ್ಫ್ಗ್ಯಾಂಗ್ ಸೊಮ್ಮರ್ ನೇತೃತ್ವದ ಐವರನ್ನೊಳಗೊಂಡ ತಂಡ ಒಂದು ದಿನದ ರಾಜ್ಯ ಪ್ರವಾಸ ಕೈಗೊಂಡಿದ್ದು ಅದರ ಅಂಗವಾಗಿ ಕೆಪಿಎ ಗೆ ಭೇಟಿ ನೀಡಿ ಹಲವು ಮಾಹಿತಿಗಳನ್ನು ಸಂಗ್ರಹಿಸಿತು.

Bavarian Police delegation visits KPA to strengthen collaboration-1ಬೆಂಗಳೂರಿನಿಂದ ನಗರಕ್ಕೆ ಆಗಮಿಸಿದ ತಂಡ ನೇರವಾಗಿ ಕರ್ನಾಟಕ ಪೊಲೀಸ್ ಅಕಾಡೆಮಿಗೆ ತೆರಳಿತು. ಎಲ್ಲರನ್ನೂ ಆತ್ಮೀಯವಾಗಿ ಬರಮಾಡಿಕೊಂಡ ಕೆಪಿಎ ನಿರ್ದೇಶಕ ವಿಪುಲ್ ಕುಮಾರ್ ಪೊಲೀಸ್ ಸಿಬ್ಬಂದಿ ನೇಮಕಾತಿ ಹಾಗೂ ತರಬೇತಿಗೆ ಸಂಬಂಧಿಸಿದಂತೆ ಪವರ್ಪಾಯಿಂಟ್ ಪ್ರಾತ್ಯಕ್ಷಿಕೆ ನೀಡಿ ಹಲವು ಮಾಹಿತಿಗಳನ್ನು ನೀಡಿದರು. ಜತೆಗೆ ತರಬೇತಿ ಅವಧಿ, ಪಠ್ಯಕ್ರಮ, ನಿಯಮಗಳು, ಟ್ರಾಫಿಕ್ ಪೊಲೀಸ್ ವ್ಯವಸ್ಥೆ ಎಲ್ಲವನ್ನೂ ಐಜಿಪಿ ಅಲೋಕ್ ಕುಮಾರ್ ಹಾಗೂ ದಯಾನಂದ್ ಮಾಹಿತಿ ತಿಳಿಸಿಕೊಟ್ಟರು. ಅಲ್ಲದೆ ತರಬೇತಿ ಪಡೆದುಕೊಳ್ಳುತ್ತಿರುವ ಪೊಲೀಸರೊಂದಿಗೆ ಸಂವಾದ  ಕೂಡ ನಡೆಯಿತು.

ರಾಜ್ಯದ ಪೊಲೀಸ್ ವ್ಯವಸ್ಥೆಯ ಗುಣಗಾನ, ಹಲವು ಮಾಹಿತಿಗಳ ಸಂಗ್ರಹ:
ಜರ್ಮನಿಯ ಬವೇರಿಯನ್ ರಾಜ್ಯದ ಐವರು ಪೊಲೀಸ್ ಅಧಿಕಾರಿಗಳ ತಂಡ ರಾಜ್ಯ ಪ್ರವಾಸ ಕೈಗೊಂಡಿದ್ದು ಬುಧವಾರ ನಗರದ ಕರ್ನಾಟಕ ಪೊಲೀಸ್ ಅಕಾಡೆಮಿಗೆ ಭೇಟಿ ನೀಡಿ ಪೊಲೀಸ್ ನೇಮಕಾತಿ ಹಾಗೂ ತರಬೇತಿಯ ಬಗ್ಗೆ ಅಧ್ಯಯನ ನಡೆಸಿದ್ದಲ್ಲದೆ ರಾಜ್ಯ ಪೊಲೀಸ್ ಇಲಾಖೆಯನ್ನು ಹಾಡಿ ಹೊಗಳಿದೆ. ನಂತರ ತಂಡ ಪೊಲೀಸ್ ಆಯುಕ್ತರ ಕಚೇರಿಗೆ ಭೇಟಿ ನೀಡಿತು. ಮಧ್ಯಾಹ್ನ 3 ಗಂಟೆಗೆ ಇರ್ವಿನ್ ರಸ್ತೆಯಲ್ಲಿನ ನೆಹರು ವೃತ್ತದಲ್ಲಿರುವ ಲಷ್ಕರ್ ಪೊಲೀಸ್ ಠಾಣೆಯಲ್ಲಿರುವ ಮಾಹಿತಿ ಪೊಲೀಸ್ ಠಾಣೆ, ಮಹಿಳಾ ಮತ್ತು ಮಕ್ಕಳ ಸಹಾಯವಾಣಿ ಘಟಕಗಳಿಗೆ ಭೇಟಿ ನೀಡಿ ಅಗತ್ಯ ಮಾಹಿತಿಗಳನ್ನು ಸಂಗ್ರಹಿಸಿತು.

ಪಾರದರ್ಶಕತೆಗೆ ಮೆಚ್ಚುಗೆ: ಮೈಸೂರಿಗೆ ಭೇಟಿ ನೀಡಿದ ತಂಡ ರಾಜ್ಯದಲ್ಲಿನ ಪೊಲೀಸ್ ನೇಮಕಾತಿ ಪಾರದರ್ಶಕತೆ, ತರಬೇತಿ ಹಾಗೂ ತಂತ್ರಜ್ಞಾನದ ತರಬೇತಿ ನೀಡುವುದರ ಬಗ್ಗೆ ಚರ್ಚೆ ನಡೆಸಿತು. ಅಲ್ಲದೇ ರಾಜ್ಯ ಪೊಲೀಸ್ ಇಲಾಖೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ನೇಮಕಾತಿಯಲ್ಲಿನ  ಪಾರದರ್ಶಕತೆಯನ್ನು ಕೊಂಡಾಡಿತು.
ನಿರ್ದೇಶಕ ವಿಭಾಗದ ಬರ್ಹಾಡ್ ಎಗ್ಗರ್, ಮುಖ್ಯ ತರಬೇತುದಾರ ಗರ್ಡ್ ಎಂಕ್ಲಿಂಗ್, ಹನ್ನ್ಸ್ ಬುಹ್ಲರ್ ಮತ್ತು ಆಕ್ಟಿಂಗ್ ಪ್ರೊಜೆಕ್ಟ್ ಹೆಡ್ ಇಂಡಿಯಾದ ವೊಲ್ಕೆರ್ ಲೆನ್ನಾರ್ಟ್ ಪ್ಲಾನ್ ಸೇರಿದಂತೆ ಇನ್ನಿತರರು ಹಾಜರಿದ್ದರು.

See also  ಅತೃಪ್ತಿ ಇದ್ದವರಿಗೆ ತೃಪ್ತಿ ಪಡಿಸಲು ಸಾಧ್ಯವೇ : ಇಬ್ರಾಹಿಂಗೆ ಸಿಎಂ ತಿರುಗೇಟು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು