News Kannada
Tuesday, September 27 2022

ಬೆಂಗಳೂರು ನಗರ

ಅತೃಪ್ತಿ ಇದ್ದವರಿಗೆ ತೃಪ್ತಿ ಪಡಿಸಲು ಸಾಧ್ಯವೇ : ಇಬ್ರಾಹಿಂಗೆ ಸಿಎಂ ತಿರುಗೇಟು - 1 min read

Photo Credit :

ಅತೃಪ್ತಿ ಇದ್ದವರಿಗೆ ತೃಪ್ತಿ ಪಡಿಸಲು ಸಾಧ್ಯವೇ : ಇಬ್ರಾಹಿಂಗೆ ಸಿಎಂ ತಿರುಗೇಟು

ಮೈಸೂರು: ಅತೃಪ್ತಿ ಇದ್ದವರಿಗೆ ತೃಪ್ತಿ ಪಡಿಸಲು ಸಾಧ್ಯವೇ ಇಲ್ಲ ಎಂದು ಸಿಎಂ ಇಬ್ರಾಹಿಂ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ಮೈಸೂರಿನಲ್ಲಿ ತಿರುಗೇಟು ನೀಡಿದ್ದಾರೆ.

ಕಾರ್ಯಕ್ರಮದ ನಿಮಿತ್ತ ಮೈಸೂರಿಗೆ ಆಗಮಿಸಿದ ಸಿಎಂ ಸಿದ್ದರಾಮಯ್ಯ ತಮ್ಮ ನಿವಾಸದ ಬಳಿ ಮಾದ್ಯಮದವರೊಂದಿಗೆ ಮಾತನಾಡಿ ನಿನ್ನೆ ಸಿಎಂ ಇಬ್ರಾಹಿಂ ಸಿದ್ದರಾಮಯ್ಯ ಆಡಳಿತ ವೈಖರಿ ಬಗ್ಗೆ ತಮ್ಮ ಅಸಮಾಧನವನ್ನು ವ್ಯಕ್ತ ಪಡಿಸಿದರು. ಈ ಹಿನ್ನಲ್ಲೆಯಲ್ಲಿ ಸಿಎಂ ಅತೃಪ್ತಿ ಇದ್ಗವರಿಗೆ ತೃಪ್ತಿ ಪಡಿಸಲು ಸಾಧ್ಯವೇ ಇಲ್ಲ ಎಂದು ಇಬ್ರಾಹಿಂಗೆ ತಿರುಗೇಟು ನೀಡಿ ಇಂತಹ ಹೇಳಿಕೆಯ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದರು.

ಮಹಾದಾಯಿ ವಿಚಾರ ಯಾವಾಗ ಸಭೆ ನಡೆಸಿದರೂ ನಾನು ಸಭೆಗೆ ಹೋಗಲು ಸಿದ್ದ. ಗೋವಾ ಸಿಎಂ ಗೈರಾದ ಬಗ್ಗೆ ಅವರೊಂದಿಗೆ ಹಾಗೂ ಮಹಾರಾಷ್ಟ್ರದ ಸಿಎಂ ಜೊತೆ ಮಾತನಾಡುತ್ತೇನೆ ಎಂದ ಅವರು, ರಾಜ್ಯದಲ್ಲಿ ಉಂಟಾಗಿರುವ ಬರ ಪರಿಸ್ಥಿತಿಯ ನಷ್ಟದ ಅಂದಾಜು ಮಾಡಲು ಹೇಳಿದ್ದು ಕಂದಾಯ ಸಚಿವರು ನಷ್ಟದ ವರದಿಯನ್ನು ಕೇಂದ್ರಕ್ಕೆ ತಲುಪಿಸಲಿದ್ದಾರೆ.  ಪೊಲೀಸರು ವೇತನ ಪರಿಷ್ಕರಣೆ ಸಕ್ರಿಯೆ ನಡೆಯುತ್ತಿದ್ದು, ಔರದ್ಕಾರ್ ವರದಿ ಆಧರಿಸಿ ಪರಿಷ್ಕರಣೆ ಬಗ್ಗೆ ಹಣಕಾಸು ಹಾಗೂ ಗೃಹ ಇಲಾಖೆಯೊಂದಿಗೆ ಚರ್ಚಿಸಿ ಅವರು ವರದಿ ಕೊಟ್ಟ ನಂತರ ಸಭೆ ಕರೆದು ತೀರ್ಮಾನ ಕೈಗೊಳ್ಳುತ್ತೇನೆ ಎಂದು ತಿಳಿಸಿದರು.

See also  ಜೆಡಿಎಸ್ ಹಿರಿಯ ಮುಖಂಡ ಕೆ.ಎಲ್.ಶಿವಲಿಂಗೇಗೌಡ ವಿಧಿವಶ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು