News Kannada
Friday, September 30 2022

ಬೆಂಗಳೂರು ನಗರ

ಬೆಂಗಳೂರಿನ ಉದ್ಯಮಿಯ ಹಣದ ದಾಹಕ್ಕೆ ಬಿಇ ಪದವೀಧರೆ ಸಾವಿಗೆ ಶರಣು - 1 min read

Photo Credit :

ಬೆಂಗಳೂರಿನ ಉದ್ಯಮಿಯ ಹಣದ ದಾಹಕ್ಕೆ ಬಿಇ ಪದವೀಧರೆ ಸಾವಿಗೆ ಶರಣು

ಬೆಂಗಳೂರು: ಮೃತರನ್ನು ಬೋಗಾದಿ ಎರಡನೇ ಹಂತದ ನಿವಾಸಿ ಜೆ.ಅಕ್ಷತಾ ಎಂದು ಗುರುತಿಸಲಾಗಿದೆ. ಸಾಲಿಗ್ರಾಮ ನಿವಾಸಿ ಜಗದೀಶ್ ಎಂಬುವರ ಪುತ್ರಿಯಾದ ಅಕ್ಷತಾ ಬೆಂಗಳೂರಿನ ಉದ್ಯಮಿ ಪುಟ್ಟೇಗೌಡ ಎಂಬವರ ಪುತ್ರ ಮಂಜುನಾಥನನ್ನು ನಾಲ್ಕು ವರ್ಷಗಳ ಹಿಂದೆ ವಿವಾಹವಾಗಿದ್ದರು.

ವಿವಾಹದ ಸಂದರ್ಭದಲ್ಲಿ ಲಕ್ಷಾಂತರ ರೂಪಾಯಿ ನಗದು ಹಾಗೂ ಚಿನ್ನಾಭರಣಗಳನ್ನು ನೀಡಲಾಗಿತ್ತು ಎನ್ನಲಾಗಿದೆ. ದಂಪತಿಯ ನಡುವೆ ಎಂಟು ತಿಂಗಳ ಹಿಂದೆಯೇ ವೈಮನಸ್ಸು ಉಂಟಾಗಿದ್ದು, ಅಕ್ಷತಾ ತವರು ಮನೆ ಸೇರಿದ್ದರು. ಆದರೂ ಪತಿಯ ಮನೆಯಿಂದ ವರದಕ್ಷಿಣೆಗಾಗಿ ಬೇಡಿಕೆ ಬರುತ್ತಲೇ ಇದ್ದು ಗಂಡ ಮಂಜುನಾಥ್, ಮಾವ ಪುಟ್ಟೇಗೌಡ, ಅತ್ತೆ ಸುಧಾಮಣಿ ಹಾಗೂ ಅತ್ತಿಗೆ ಕುತಂತ್ರ ಮತ್ತು ಗಂಡನ ವರದಕ್ಷಿಣೆ ದಾಹಕ್ಕೆ ಮನನೊಂದು ನನಗೆ ಇಷ್ಟವಿಲ್ಲದೆ ಸಾವಿಗೆ ಶರಣಾಗುತ್ತಿದ್ದೇನೆ ಎಂದು ಡೆತ್ ನೋಟ್ ಬರೆದಿಟ್ಟು, ಬಿಇ ಪದವೀಧರೆ ಅಕ್ಷತಾ (25) ಎಂಬುವರು ಆತ್ಮಹತ್ಯೆಗೆ ಶರಣಾಗಿದ್ದಾರೆ.  

ಅಕ್ಷತಾಳನ್ನು ಕಳೆದ 4 ವರ್ಷಗಳ ಹಿಂದೆ ಮಂಡ್ಯ ಮೂಲದ ಮಂಜುನಾಥ್ ಎಂಬುವನಿಗೆ ಸುಮಾರು 50 ಲಕ್ಷ ರೂ. ಖರ್ಚು ಮಾಡಿ ಬೆಂಗಳೂರಿನಲ್ಲಿ ಮದುವೆ ಮಾಡಿಕೊಡಲಾಗಿತ್ತು. ಇವರಿಗೆ 3 ವರ್ಷದ ಗಂಡು ಮಗು ಸಹ ಇದೆ. ಈ ಕುಟುಂಬ ಬೆಂಗಳೂರಿನಲ್ಲೇ ವಾಸವಿದೆ. ಅಲ್ಲಿನ ಮೆಜೆಸ್ಟಿಕ್ ಬಳಿಯ ಲಾಡ್ಜ್ ಮತ್ತು ಲೇಔಟ್ ಮಾಲೀಕರಾಗಿರುವ ಮಂಜನಾಥನದ್ದು ಶ್ರೀಮಂತ ಕುಟುಂಬ.

 

See also  ಬೆಂಗಳೂರು: ಲೋನ್ ಕೊಡಿಸುವುದಾಗಿ ನಂಬಿಸಿ ವಂಚನೆ, ಐವರು ಬಂಧನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು