News Kannada
Sunday, September 25 2022

ಬೆಂಗಳೂರು ನಗರ

ವಿಷ್ಣು ಸಮಾಧಿಗೆ ಮುಗಿಯದ ಭೂ ಕಂಟಕ - 1 min read

Photo Credit :

ವಿಷ್ಣು  ಸಮಾಧಿಗೆ ಮುಗಿಯದ ಭೂ ಕಂಟಕ

ಮೈಸೂರು: ಜಾಗದ ವಿವಾದದಿಂದ ಬೆಂಗಳೂರಿನಿಂದ ಮೈಸೂರಿಗೆ ಸ್ಥಳಾಂತರ ಮಾಡಲು ಉದ್ದೇಶಿಸಿರುವ ವಿಷ್ಣು ಸಮಾಧಿಗೆ ಇಲ್ಲೂ ಜಮೀನು ನೀಡಲು ಸಾಗುವಳಿಗಾರರು ನಿರಾಕರಿಸಿದ್ದು ಮತ್ತೊಮ್ಮೆ ವಿಷ್ಣು ಸಮಾಧಿಗೆ ಭೂ ಕಂಟಕ ಎದುರಾಗಿದೆ.

ಎಚ್.ಡಿ.ಕೋಟೆ ರಸ್ತೆಯ ಉದ್ಬೂರು ಗೇಟ್ ಬಳಿ ಇರುವ ಮೈಸೂರು ತಾಲೂಕು ಹಾಲಾಳು ಗ್ರಾಮದ ಸರ್ವೇ ನಂ.8ರಲ್ಲಿ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣಕ್ಕೆ 5 ಎಕರೆ ಜಾಗ ನೀಡಲು ಸರ್ಕಾರ ನಿರ್ಧರಿಸಿತ್ತು. ಮಾನಂದವಾಡಿ ಮುಖ್ಯರಸ್ತೆಗೆ ಹೊಂದಿಕೊಂಡಂತಿರುವ ಈ ಜಾಗ ಸ್ಮಾರಕ ನಿರ್ಮಾಣಕ್ಕೆ ಸೂಕ್ತವಾಗಿದೆ ಎಂದು ಭಾರತಿ ವಿಷ್ಣುವರ್ಧನ್ ಕೂಡ ಸಮ್ಮತಿಸಿದ್ದರಿಂದ ಸ್ಮಾರಕ ನಿರ್ಮಾಣಕ್ಕೆ ಇದ್ದ ಅಡ್ಡಿ ಆತಂಕಗಳು ನಿವಾರಣೆಯಾದವು ಎಂದೇ ಎಲ್ಲರೂ ಭಾವಿಸಿದ್ದರು.

ಆದರೆ ಈ ಜಾಗವನ್ನು ಸುಮಾರು 60 ವರ್ಷಗಳಿಂದ ಉಳುಮೆ ಮಾಡಿಕೊಂಡು ಬಂದಿರುವ ಗ್ರಾಮದ ಚೆಂಗಬಿಂಗಿ ಹನುಮನಾಯಕನ ಕುಟುಂಬ ಯಾವುದೇ ಕಾರಣಕ್ಕೂ ಜಮೀನು ಬಿಟ್ಟುಕೊಡುವುದಿಲ್ಲ. ಈ ಜಮೀನು ಬಿಟ್ಟರೆ ನಮ್ಮ ಜೀವನಕ್ಕೆ ಯಾವುದೇ ದಾರಿ ಇಲ್ಲ. ಆದ್ದರಿಂದ ಸರ್ಕಾರ ಜಾಗ ಕಿತ್ತುಕೊಂಡರೆ ಆತ್ಮಹತ್ಯೆಯೇ ದಾರಿ ಎನ್ನುವ ಬೆದರಿಕೆಯೊಡಿದ್ದಾರೆ. ಸರ್ವೆ ನಂ.8ರಲ್ಲಿ `ಬಿ’ ಖರಾಬಿನ ಸುಮಾರು 88 ಎಕರೆ ಜಮೀನಿದ್ದು, ಇದನ್ನು 30 ಕುಟುಂಬಗಳು ಸಾಗುವಳಿ ಮಾಡುತ್ತಿವೆ. 1932ರ ದಾಖಲೆಗಳ ಪ್ರಕಾರ ಹಾಲಿ ಸಾಗುವಳಿ ಮಾಡುತ್ತಿರುವ ಹನುಮನಾಯಕ ಅವರ ಹೆಸರಿನಲ್ಲಿ 6.19 ಎಕರೆ ಜಮೀನಿದ್ದು, ಇದಕ್ಕೆ ಪೂರಕವಾಗಿ 1970 ರಿಂದ ಕಂದಾಯ ಪಾವತಿಸಿರುವ ದಾಖಲೆಯೂ ಇದೆ. ಬರವಣಿಗೆಯ ಫಸಲು ಪಹಣಿ, ಇವರೇ ಭೂ ಮಾಲೀಕರು ಎಂದು ಪರಿಗಣಿಸಿ ಅರಣ್ಯ ಇಲಾಖೆ ಸಸಿಗಳನ್ನು ನೀಡಿದೆ. 88 ಎಕರೆ ಜಮೀನಿನಲ್ಲಿ ಹನುಮನಾಯಕ ಕುಟುಂಬ ಹೊರತುಪಡಿಸಿ ಉಳಿದೆಲ್ಲಾ ಅಕ್ಕಪಕ್ಕದ ಜಮೀನಿನವರಿಗೆ ಸರ್ಕಾರ ಬರವಣಿಗೆ ಪಹಣಿ ಮೇರೆಗೆ ಖಾತೆ ಮಾಡಿಕೊಟ್ಟಿದೆ. ಈ ವೇಳೆಗೆ ಬರವಣಿಗೆ ಪಹಣಿಯನ್ನು ಕಂಪ್ಯೂಟರೀಕರಣ ಮಾಡುವ ಪ್ರಕ್ರಿಯೆ ಆರಂಭಗೊಂಡಿತ್ತು. ಆದರೆ ಹನುಮನಾಯಕ ತೀರಿಕೊಂಡಿದ್ದರಿಂದ ಈ ಕುಟುಂಬ ಕಂಪ್ಯೂಟರೀಕರಣ ಪಹಣಿ ಮಾಡಿಸಿರಲಿಲ್ಲ.

ಆದರೂ ಈಗಲೂ ಈ ಜಮೀನಿನಲ್ಲಿ ಹನುಮನಾಯಕ ಅವರ ಮಕ್ಕಳು, ಮೊಮ್ಮಕ್ಕಳು ಅನುಭೋಗದಾರರಾಗಿದ್ದು, ಸರ್ಕಾರ ದಾಖಲೆಗಳ ಪ್ರಕಾರ `ಬಿ’ ಖರಾಬು ಎಂದು ಗುರುತಿಸಿರುವ 6.19 ಎಕರೆ ಜಮೀನಿನಲ್ಲಿ 5 ಎಕರೆಯನ್ನು ಸ್ಮಾರಕ್ಕೆ ಎಂದು ನಿಗದಿಪಡಿಸಿದೆ. ಸರ್ಕಾರದ ಈ ಕ್ರಮವನ್ನು ಖಂಡಿಸಿ ಹನುಮನಾಯಕ ಕುಟುಂಬ ಈಗ ನ್ಯಾಯಾಲಯದ ಮೊರೆ ಹೋಗಲು ಮುಂದಾಗಿರುವುದರಿಂದ ವಿಷ್ಣು ಸ್ಮಾರಕ ಮತ್ತೆ ಕಗ್ಗಂಟಾಗುವ ಲಕ್ಷಣಗಳು ಗೋಚರಿಸುತ್ತಿವೆ. ನಮ್ಮ ತಾತನ ಕಾಲದಿಂದಲೂ ಈ ಜಮೀನು ಉಳುಮೆ ಮಾಡುತ್ತಾ ಬಂದಿದ್ದು, ಇದೇ ನಮ್ಮ ಜೀವನಕ್ಕೆ ಆಧಾರವಾಗಿದೆ. ಈಗ ಇಲ್ಲಿ ಸ್ಮಾರಕ ನಿರ್ಮಾಣಕ್ಕೆ ಮುಂದಾಗಿ ನಮ್ಮ ಕುಟುಂಬದವರನ್ನು ಸಮಾಧಿ ಮಾಡಲು ಸರ್ಕಾರ ಮುಂದಾಗಿದೆ. ನಮ್ಮ ಬದುಕು ಕಸಿದುಕೊಳ್ಳಲು ಬಿಡುವುದಿಲ್ಲ. ಸ್ಮಾರಕಕ್ಕೆ ಬೇರೆ ಜಾಗ ನೀಡಲಿ. ಇಲ್ಲವಾದರೆ ನ್ಯಾಯಾಲಯದ ಮೊರೆ ಹೋಗುತ್ತೇವೆ ಎನ್ನುತ್ತಾರೆ ಸಣ್ಣಪ್ಪ, ಚೆಂಗಬಿಂಗಿ ಹನುಮನಾಯಕರ ಮೊಮ್ಮಗ.

See also  ಐಎಂಎ ಕಂಪನಿ ವಂಚನೆ ಪ್ರಕರಣ: ಆಡಿಟರ್ ಎಸ್ ಐಟಿ ವಶಕ್ಕೆ

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಜಿಲ್ಲಾಧಿಕಾರಿ ದಾಖಲೆ ಪ್ರಕಾರ ಹಾಲಾಳು ಸರ್ವೆ ನಂ.8ರಲ್ಲಿ ಖರಾಬು ಎಂದು ಗುರುತಿಸಿರುವ ಜಾಗವನ್ನು ವಾರ್ತಾ ಇಲಾಖೆಗೆ ಹಸ್ತಾಂತರಿಸಲು ಪ್ರಕ್ರಿಯೆ ಆರಂಭಗೊಂಡಿದೆ. ಅವರು ಅನುಭೋಗದಲ್ಲಿರುವ ವಿಷಯ ಜಿಲ್ಲಾಡಳಿತದ ಗಮನಕ್ಕೆ ಬಂದಿಲ್ಲ ಎನ್ನುತ್ತಾರೆ ಡಿ.ರಂದೀಪ್.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು