ಬೆಂಗಳೂರು: ಇತ್ತೀಚೆಗೆ ವಿವಾದದ ಕೇಂದ್ರ ಬಿಂದುವಾಗಿರುವ ಸಂಖ್ಯಾಶಾಸ್ತ್ರ ಆರ್ಯವರ್ಧನ್ ವಿರುದ್ಧ ಹಣವಂಚನೆ ಆರೋಪ ದೂರು ದಾಖಲಾಗಿದೆ.
ಎಂಟು ಮಹಿಳೆಯರು ಆರ್ಯವರ್ಧನ್ ವಿರುದ್ಧ ದೂರು ದಾಖಲಿಸಿದ್ದು, ಮಹಿಳೆಯರ ಬಳಿ ತಲಾ 24 ಸಾವಿರ ರೂ. ಹಣ ಪಡೆದ ಆರ್ಯವರ್ಧನ್ ಸಂಖ್ಯಾಶಾಸ್ತ್ರ ಕಲಿಸುವುದಾಗಿ ಹೇಳಿ, ಹಣವೂ ನೀಡದೆ, ತರಗತಿಯೂ ನಡೆಸದೆ ಮೋಸ ಮಾಡಿದ್ದಾನೆ ಎಂದು ಮಹಿಳೆಯರು ದೂರು ನೀಡಿದ್ದಾರೆ.
ಈ ಸಂಬಂಧ ರಾಜರಾಜೇಶ್ವರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಹುಬ್ಬಳ್ಳಿ, ಮೈಸೂರು ಇತರ ಜಿಲ್ಲೆಗಳಿಂದ ಮಹಿಳೆಯರು ಬಂದು ದೂರು ನೀಡಿದ್ದಾರೆ.