ಬೆಂಗಳೂರು: ಮಾಜಿ ಭೂಗತ ದೊರೆ, ಜಯಕರ್ನಾಟಕ ಸಂಘಟನೆಯ ಸಂಸ್ಥಾಪಕ ಮುತ್ತಪ್ಪ ರೈ ಸೋಮವಾರ ಬಿಡದಿಯ ನಿವಾಸದಲ್ಲಿ ಎರಡನೇ ವಿವಾಹ ಜೀವನಕ್ಕೆ ಕಾಲಿಟ್ಟಿದ್ದಾರೆ.
ಮುತ್ತಪ್ಪ ರೈ ಅವರು ಶಾಸ್ತ್ರೋಕ್ತವಾಗಿ ಅನುರಾಧ ಎಂಬುವರನ್ನು ಮದುವೆಯಾಗಿದ್ದು, ರೈ ಆಪ್ತರು ಮತ್ತು ಕುಟುಂಬಸ್ಥರು ಮಾತ್ರ ಈ ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಮುತ್ತಪ್ಪ ರೈ ಮತ್ತು ಮಹಿಳಾ ಉದ್ಯಮಿಯಾಗಿರುವ ಅನುರಾಧ ಮಧ್ಯೆ ಹಲವು ವರ್ಷಗಳ ಪರಿಚಯವಿದ್ದು, ಅನುರಾಧ ಅವರು ಮೂಲತಃ ಸಕಲೇಶಪುರದವರಾಗಿದ್ದು, ಹಲವು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. 2013 ರಲ್ಲಿ ಮುತ್ತಪ್ಪ ರೈ ಮೊದಲ ಪತ್ನಿ ರೇಖಾ ರೈ ಅನಾರೋಗ್ಯದಿಂದ ನಿಧನರಾಗಿದ್ದು, ಇವರಿಗೆ ಎರಡು ಗಂಡು ಮಕ್ಕಳಿದ್ದಾರೆ.