ರಾಮನಗರ: ಓಮ್ನಿ ಕಾರು ಹಾಗೂ ಇನೋವಾ ಕಾರು ನಡುವೆ ಅಪಘಾತ ಸಂಭವಿಸಿದ್ದು, ಒಂದೇ ಕುಟುಂಬದ ಮೂವರು ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಇಲ್ಲಿನ ತಾಳಕೆರೆ ಹ್ಯಾಂಡ್ ಪೋಸ್ ಸಮೀಪ ಭಾನುವಾರ ನಡೆದಿದೆ.
ಮೃತರು ಶಿವಮೊಗ್ಗದ ಸೀಗೇಬಾಗಿ ನಿವಾಸಿಗಳಾಗಿದ್ದು, ಕುಣಿಗಲ್ ಕಡೆಯಿಂದ ಮಾಗಡಿಯ ಸಾವನದುರ್ಗಕ್ಕೆ ಆಗಮಿಸುವಾಗ ಈ ಅವಘಡ ಸಂಭವಿಸಿದೆ. ಘಟನೆಯಲ್ಲಿ ಮಗು ಸೇರಿದಂತೆ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಒಂಬತ್ತಕ್ಕೂ ಹೆಚ್ಚು ಜನರು ಗಂಭೀರ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಕುಣಿಗಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಕುದೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.