ಬೆಂಗಳೂರು: ಇಡೀ ಜಗತ್ತೇ ಹೊಸ ವರ್ಷದ ಸಂಭ್ರಮಾಚರಣೆಗೆ ಸಿದ್ಧತೆಗಳನ್ನು ನಡೆಸುತ್ತಿರುವಾಗ ಬಿಎಂಟಿಸಿ ಕೂಡ ಡಿ.31 ರ ತಡರಾತ್ರಿವರೆಗೂ ಹೆಚ್ಚಿನ ಸಾರಿಗೆ ಸೌಲಭ್ಯ ಕಲ್ಪಿಸಲು ಸಕಲ ಸಿದ್ಧತೆಗಳನ್ನು ನಡೆಸಿದೆ.
ಸಂಸ್ಥೆಯ ಆಚರಣೆಯಲ್ಲಿರುವ ಬಿಗ್-10 ಮಾರ್ಗಗಳನ್ನು ರಾತ್ರಿ 10.30 ರಿಂದ ತಡರಾತ್ರಿ 2 ಘಂಟೆಯವರೆಗೆ ವಿಸ್ತರಣೆ ಮಾಡಿ ಹಾಗೂ ಸದರಿ ದಿನದಂದು ಎಲ್ಲಾ ರಾತ್ರಿ ಸೇವೆ ಅನುಸೂಚಿಗಳನ್ನು ಆಚರಣೆ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಸಂಸ್ಥೆಯು ಹೇಳಿದೆ.
ಮಾತ್ರವಲ್ಲದೆ ಪ್ರಯಾಣಿಕರ ಸಂಖ್ಯೆ ಹೆಚ್ಚಿರುವ ಮಂತ್ರಿ ಮಾಲ್, ಮೆಟ್ರೋ ರೈಲು ನಿಲ್ದಾಣದಿಂದ ಕೆಂಪೇಗೌಡ ಬಸ್ ನಿಲ್ದಾಣ ಮತ್ತು ಎಂ.ಜಿ.ರೋಡ್ ಬಸ್ ನಿಲ್ದಾಣ ಹಾಗೂ ಶಿವಾಜಿನಗರ ಮತ್ತು ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಹೆಚ್ಚಿನ ಬಸ್ ಗಳ ವ್ಯವಸ್ಥೆ ಮಾಡಲು ನಿಲ್ದಾಣಾಧಿಕಾರಿಗಳಿಗೆ ತಿಳಿಸಲಾಗಿದೆ.
ಮಾರ್ಗ ಸಂ.
G-1 ಎಂ.ಜಿ ರಸ್ತೆ ಮೆಟ್ರೋ ನಿಲ್ದಾಣದಿಂದ ಕಾಡುಗೋಡಿ ಬಸ್ ನಿಲ್ದಾಣಕ್ಕೆ
G -1 ಎಂ.ಜಿ ರಸ್ತೆ ಮೆಟ್ರೋ ನಿಲ್ದಾಣದಿಂದ ಕಾಡುಗೋಡಿ ಬಸ್ ನಿಲ್ದಾಣಕ್ಕೆ
G -2 ಎಂ.ಜಿ ರಸ್ತೆ ಮೆಟ್ರೋ ನಿಲ್ದಾಣದಿಂದ ಸರ್ಜಾಪುರಕ್ಕೆ
G -3 ಬ್ರಿಗೇಡ್ ರಸ್ತೆಯಿಂದ ಎಲೆಕ್ಟ್ರಾನಿಕ್ ಸಿಟಿಗೆ
G -4 ಬ್ರಿಗೇಡ್ ರಸ್ತೆ ಬನ್ನೇರುಘಟ್ಟದಿಂದ ನ್ಯಾಷನಲ್ ಪಾರ್ಕ್ ಗೆ
G -6 ಎಂ.ಜಿ ರಸ್ತೆ ಮೆಟ್ರೋ ನಿಲ್ದಾಣದಿಂದ ಕೆಂಗೇರಿ ಹೌಸಿಂಗ್ ಬೋರ್ಡ್ ಕ್ವಾರ್ಟ್ರ್ಸ್ ಕ್ಕೆ
G -7 ಎಂ.ಜಿ ರಸ್ತೆ ಮೆಟ್ರೋ ನಿಲ್ದಾಣದಿಂದ ಜನಪ್ರಿಯ ಟೌನ್ಶಿಪ್ ಗೆ
G -8 ಎಂ.ಜಿ ರಸ್ತೆ ಮೆಟ್ರೋ ನಿಲ್ದಾಣದಿಂದ ನೆಲಮಂಗಲಕ್ಕೆ
G -9 ಎಂ.ಜಿ ರಸ್ತೆ ಮೆಟ್ರೋ ನಿಲ್ದಾಣದಿಂದ ಯಲಹಂಕ ಉಪನಗರಕ್ಕೆ
G -10 ಎಂ.ಜಿ ರಸ್ತೆ ಮೆಟ್ರೋ ನಿಲ್ದಾಣದಿಂದ ಆರ್.ಕೆ.ಹೆಗಡೆ ನಗರಕ್ಕೆ
G -11 ಎಂ.ಜಿ ರಸ್ತೆ ಮೆಟ್ರೋ ನಿಲ್ದಾಣದಿಂದ ಬಾಗಲೂರು ಗೆ
G -12 ಎಂ.ಜಿ ರಸ್ತೆ ಮೆಟ್ರೋ ನಿಲ್ದಾಣದಿಂದ ಹೊಸಕೋಟೆ ಗೆ