News Kannada
Friday, December 09 2022

ಬೆಂಗಳೂರು ನಗರ

ಸಚಿವ ಹೆಚ್.ಎಸ್.ಮಹದೇವಪ್ರಸಾದ್ ನಿಧನಕ್ಕೆ ಸಿಎಂ ಕಂಬನಿ: ಇಂದು ಸರ್ಕಾರಿ ರಜೆ ಘೋಷಣೆ

Photo Credit :

ಸಚಿವ ಹೆಚ್.ಎಸ್.ಮಹದೇವಪ್ರಸಾದ್ ನಿಧನಕ್ಕೆ ಸಿಎಂ ಕಂಬನಿ: ಇಂದು ಸರ್ಕಾರಿ ರಜೆ ಘೋಷಣೆ

ಬೆಂಗಳೂರು: ಸಚಿವ ಹೆಚ್.ಎಸ್.ಮಹದೇವಪ್ರಸಾದ್ ನಿಧನ ವೈಯುಕ್ತಿಕವಾಗಿ ನನಗೆ ಹಾಗೂ ಪಕ್ಷಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಂಬನಿ ಮಿಡಿದಿದ್ದಾರೆ.

ಬೆಂಗಳೂರಿನ ಕಾವೇರಿ ನಿವಾಸದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಹೆಚ್.ಎಸ್.ಮಹದೇವ ಪ್ರಸಾದ್ ಸಾವು ಆಘಾತ ತಂದಿದೆ ಎಂದರು. ಅವರು ಯಾವುದೇ ಕೆಲಸ ಕೊಟ್ಟರೂ ನಿಷ್ಠೆಯಿಂದ ಮಾಡುತ್ತಿದ್ದರು. ಪಕ್ಷಕ್ಕೂ ಅವರು ನಿಷ್ಠರಾಗಿರುತ್ತಿದ್ದರು. ಒಂದೇ ಒಂದು ಕಪ್ಪು ಚುಕ್ಕೆಯೂ ಅವರ ಜೀವನದಲ್ಲಿ ಇರಲಿಲ್ಲ. ಬಹಳ ಸುಸಂಸ್ಕೃತ ವ್ಯಕ್ತಿ. ಅವರು ಒಂದು ದಿನವೂ ಯಾರಿಗೂ ಬೈದಿದ್ದನ್ನು ನೋಡಿಲ್ಲ. ಐದು ಬಾರಿ ಗುಂಡ್ಲುಪೇಟೆಯಲ್ಲಿ ಶಾಸಕರಾಗಿ ಕಾರ್ಯನಿರ್ವಹಿಸಿದ್ದರು ಎಂದರು.

ಅವರದು ಚಿಕ್ಕ ವಯಸ್ಸು, ಸಾಯುವಂಥಹ ವಯಸ್ಸಲ್ಲ. ಅವರಿಗೆ ಒಮ್ಮೆ ಹೃದಯಾಘಾತವಾಗಿತ್ತು. ಬೈಪಾಸ್ ಸರ್ಜರಿಯೂ ಆಗಿತ್ತು. ಅದರ ನಂತರ ತುಂಬಾ ಎಚ್ಚರಿಕೆಯಿಂದ ಇರುತ್ತಿದ್ದರು. ಬೆಳಿಗ್ಗೆ ಬಂದ ಸುದ್ದಿ ನಿಜಕ್ಕೂ ಆಘಾತಕರವಾಗಿದೆ. ಅವರ ಕುಟುಂಬ ಮಾದರಿ ಕುಟುಂಬವಾಗಿದೆ. ಅವರ ಕುಟುಂಬಕ್ಕೆ ಭಗವಂತ ದುಃಖಭರಿಸುವ ಶಕ್ತಿ ನೀಡಲಿ. ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಮಂಗಳವಾರ ಸರ್ಕಾರಿ ರಜೆ ಘೋಷಿಸಲಾಗಿದೆ. ರಾಜ್ಯದಲ್ಲಿ ಮೂರು ದಿನ ಶೋಕಾಚರಣೆ ನಡೆಯಲಿದೆ ಎಂದು ತಿಳಿಸಿದರು.

 

See also  ಹುದ್ದೆಗಾಗಿ ನಕಲಿ ದಾಖಲೆ: ವೈದ್ಯರ ಪರ ತೀರ್ಪಿತ್ತ ಹೈಕೋರ್ಟ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು