ಬೆಂಗಳೂರು: ಬೆಂಗಳೂರಿನಲ್ಲಿ ಮಹಿಳೆಯರ ಮೇಲೆ ನಡೆದ ಸಾಮೂಹಿಕ ಲೈಂಗಿಕ ಕಿರುಕುಳ ಪ್ರಕರಣದ ವಿರುದ್ಧ ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಶುಕ್ರವಾರ ಮತ್ತೆ ಕಾಮುಕರು ಅಟ್ಟಹಾಸ ಮೆರೆದಿದ್ದು, ಬೆಳ್ಳಂಬೆಳಗ್ಗೆ ನಗರದ ಕೆ.ಜಿ.ಹಳ್ಳಿಯಲ್ಲಿ ಯುವತಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದ ಹೇಯ ಘಟನೆ ನಡೆದಿದೆ.
ಯುವಕ ತನ್ನ ಮೇಲೆ ಎರಗುತ್ತಿದ್ದಂತೆ ಯುವತಿ ಚೀರಿಕೊಂಡಿದ್ದು, ಇದರಿಂದ ಮನೆಯೊಂದರಲ್ಲಿದ್ದ ನಾಯಿ ಜೋರಾಗಿ ಬೊಗಳಿದೆ. ಕೂಡಲೇ ಸಾರ್ವಜನಿಕರು ಬರುವಷ್ಟರಲ್ಲಿ ಕಾಮುಕ ಪರಾರಿಯಾಗಿದ್ದಾನೆ. ಘಟನೆಯ ದೃಶ್ಯಾವಳಿ ಮನೆಯೊಂದರಲ್ಲಿ ಅಳವಡಿಸಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇಂದು ಬೆಳಗ್ಗೆ 6.30ರ ಸುಮಾರಿಗೆ ಬಸ್ ನಿಲ್ದಾಣಕ್ಕೆ ತೆರಳುತ್ತಿದ್ದ ಯುವತಿಯನ್ನು ಹಿಂಬಾಲಿಸಿದ ಕಾಮುಕ, ಆಕೆಯನ್ನು ಅಡ್ಡಗಟ್ಟಿ ತುಟಿಗೆ ಮುತ್ತಿಟ್ಟು ನಾಲಿಗೆ ಕಚ್ಚಿ ಪರಾರಿಯಾಗಿದ್ದಾನೆ.