ಬೆಂಗಳೂರು: ಎರಡು ಬಸ್ಸುಗಳ ನಡುವೆ ಚಾಲಕ ಸಿಲುಕಿ ಸಾವನ್ನಪ್ಪಿರುವ ಘಟನೆ ಬೆಂಗಳುರಿನಲ್ಲಿ ನಡೆದಿದೆ.
ರಮೇಶ್ ಎಂಬವರು ಮೃತಪಟ್ಟ ವ್ಯಕ್ತಿ. ರಮೇಶ್ ಅವರು ತಾನು ಕೆಲಸ ಮಾಡುತ್ತಿದ್ದ ಬಸ್ಸನ್ನು ಕ್ಲೀನ್ ಮಾಡುತ್ತಿದ್ದ ಸಂದರ್ಭ ಮತ್ತೊಂದು ಹಸಿರು ಬಣ್ಣದ ಬಿಎಂಟಿಸಿ ಬಸ್ ಅಡ್ಡವಾಗಿ ನಿಂತಿದ್ದರಿಂದ ಎರಡು ಬಸ್ಗಳ ನಡುವೆ ಸಿಲುಕಿ ರಮೇಶ್ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಉಪ್ಪಾರಪೇಟೆ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ.