ಬೆಂಗಳೂರು: ವೈಟ್ ಫೀಲ್ಡ್ ನ ಆ್ಯಕ್ಸೆಂಚರ್ ಕಂಪನಿ ಬಳಿ ನಿರ್ಮಿಸುತ್ತಿದ್ದ, ನಿರ್ಮಾಣ ಹಂತದ ಅಪಾರ್ಟ್ ಮೆಂಟ್ ಕುಸಿದು ಹಲವರು ಗಾಯಗೊಂಡಿದ್ದು, ಕೂಲಿ ಕಾರ್ಮಿಕರು ಅವಶೇಷಗಳಡಿ ಸಿಲುಕಿದ್ದಾರೆ ಎಂದು ಹೇಳಲಾಗುತ್ತಿದೆ.
ಕಟ್ಟಡದ 3ನೇ ಅಂತಸ್ತು ಇಂದು ಬೆಳಗಿನ ಜಾವ ಕುಸಿದಿದ್ದು, ಹಲವು ಕಾರ್ಮಿಕರು ಗಾಯಗೊಂಡಿದ್ದಾರೆ. ಅಗ್ನಿ ಶಾಮಕ ದಳ ಸಿಬ್ಬಂದಿ ಸ್ಥಳಕ್ಕಾಗಮಿಸಿದ್ದು, ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದೆ.
ವೈಟ್ ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ದಿವ್ಯಶ್ರೀ ಬಿಲ್ಡರ್ಸ್ ಕಂಪನಿ ಈ ಅಪಾರ್ಟ್ ಮೆಂಟ್ ನಿರ್ಮಾಣ ಮಾಡುತ್ತಿತ್ತು.