ಬೆಂಗಳೂರು: ಫೆಬ್ರವರಿ 14 ರ ಒಳಗೆ ಕಾಲೇಜಿನ ಎಲ್ಲಾ ವಿದ್ಯಾರ್ಥಿನಿಯರು ಬಾಯ್ಫ್ರೆಂಡ್ಗಳನ್ನು ಹೊಂದಿರಲೇ ಬೇಕು, ಇಲ್ಲದಿದ್ದರೆ ಕಾಲೇಜು ಪ್ರವೇಶಕ್ಕೆ ಅವಕಾಶವಿಲ್ಲ ಎಂದು ಕಾಲೇಜಿನ ನೋಟೀಸ್ ಬೋರ್ಡ್ ನಲ್ಲಿ ಹಾಕಲಾಗಿದೆ.
ಹೌದು… ಆರ್ವಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಎಲ್ಲಾ ವಿದ್ಯಾರ್ಥಿನಿಯರು ಬಾಯ್ಫ್ರೆಂಡ್ಗಳನ್ನು ಹೊಂದುವುದು ಕಡ್ಡಾಯ ಎಂದು spread love ಎಂಬ ಹೆಸರಿನಲ್ಲಿ ಕಾಲೇಜಿನ ಕಿಡಿಗೇಡಿಗಳು ನೋಟೀಸ್ ಬೋರ್ಡ್ನಲ್ಲಿ ನಕಲಿ ನೋಟೀಸ್ ಹಾಕಿದ್ದಾರೆ. ಮಾತ್ರವಲ್ಲ ಪ್ರವೇಶ ಬೇಕಾದಲ್ಲಿ ಬಾಯ್ಫ್ರೆಂಡ್ ಜೊತೆಗಿರುವ ಫೋಟೋ ತೋರಿಸಲೇಬೇಕು ಎಂದು ನೋಟೀಸ್ ಬೋರ್ಡ್ನಲ್ಲಿ ಹಾಕಲಾಗಿದೆ.
ಈ ಬಗ್ಗೆ ಕಾಲೇಜಿಗೆ ಸುದ್ದಿ ತಿಳಿಯುತ್ತಿದ್ದಂತೆ ಸೈಬರ್ ಕ್ರೈಂ ವಿಭಾಗಕ್ಕೆ ದೂರು ನೀಡಲಾಗಿದ್ದು, ಪ್ರಾಂಶುಪಾಲರ ನಕಲಿ ಸಹಿಯನ್ನೂ ಕೂಡ ನೋಟೀಸ್ನಲ್ಲಿ ಬರೆಯಲಾಗಿದೆ.