ಬೆಂಗಳೂರು: ಕಾಲೇಜಿನಲ್ಲಿ ತನಗೆ ಪಾಠ ಮಾಡಿದ್ದ ಪ್ರಾಧ್ಯಾಪಕಿಯೊಬ್ಬರಿಗೆ ವಾಟ್ಸಾಪ್ನಲ್ಲಿ ಅಶ್ಲೀಲ ಸಂದೇಶಗಳನ್ನು ಕಳುಹಿಸಿ ಕಿರುಕುಳ ನೀಡುತ್ತಿದ್ದ ಕಾಮುಕ ವಿದ್ಯಾರ್ಥಿಯನ್ನು ಪೊಲೀಸರು ಬಂಧಿಸಿದ್ದಾರೆ.
ಎಂಇಎಸ್ ಕಾಲೇಜಿನ ಹಳೆ ವಿದ್ಯಾರ್ಥಿ ಶಿವರಾಜ್ ಎಂಬಾತನೇ ವಿದ್ಯೆ ಕಲಿಸಿದ ಪ್ರಾಧ್ಯಾಪಕಿಯ ಮೇಲೇ ಕಣ್ಣು ಹಾಕಿದ ಕಾಮುಕ ಯುವಕ.
ಪ್ರೊಫೆಸರ್ ಪೊಲೀಸರಿಗೆ ಈ ಸಂಬಂಧ ದೂರು ನೀಡಿದ್ದು, ‘ಫ್ರೀ ಇದ್ದೀಯಾ ..ಬರ್ತಿಯಾ, ಐ ಲವ್ ಯೂ..ಮಿಸ್ ಯು ..’ಹೀಗೆ ಅಸಹ್ಯವಾಗಿ ಮೆಸೇಜ್ ಮಾಡಿ ಶಿವರಾಜ್ ಕಿರುಕುಳ ನೀಡುತ್ತಿದ್ದ ಎಂದು ಪ್ರಾಧ್ಯಾಪಕಿ ತನ್ನ ನೋವನ್ನು ಹೇಳಿಕೊಂಡಿದ್ದಾರೆ. ಇದೀಗ ಪೊಲೀಸರು ಶಿವರಾಜ್ನನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.