ಬೆಂಗಳೂರು: ಕರ್ತವ್ಯನಿರತ ಪೇದೆಯೊಬ್ಬ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ಪೇದೆಯನ್ನು ಮಹಾರಾಷ್ಟ್ರ ಮೂಲದ ಸುರೇಶ್ ಗಾಯಕ್ ವಾಡ್ ಎಂದು ಗುರುತಿಸಲಾಗಿದ್ದು, ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ ಪೇದೆಯಾಗಿದ್ದು, ಇವರಿಗೆ32 ವರ್ಷ ವಯಸ್ಸಾಗಿತ್ತು.
ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಗೇಟ್ ನಂಬರ್ 2ರಲ್ಲಿ ಈ ಘಟನೆ ನಡೆದಿದೆ.