ಬೆಂಗಳೂರು: ವಿಜಯನಗರದಲ್ಲಿ ಯುವತಿಯೊಬ್ಬಳು ಪ್ರೀತಿಸಿದ ಯುವಕ ಮದುವೆಯಾಗಲು ನಿರಾಕರಿಸಿದ್ದಕ್ಕೆ ಆ್ಯಸಿಡ್ ದಾಳಿ ನಡೆಸಿದ್ದಾಳೆ.
ಹೌದು.. ದಾಳಿ ಮಾಡಿದ ಯುವತಿ ವಿದ್ಯಾ ಮತ್ತು ಆ್ಯಸಿಡ್ ದಾಳಿಗೊಳಗಾದ ಯುವಕ ಜಯಕುಮಾರ್ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದು, ಮದುವೆಗೆ ಜಯಕುಮಾರ್ ನಿರಾಕರಿಸಿದ ಹಿನ್ನೆಲೆಯಲ್ಲಿ ಯುವತಿ ಈ ಕೃತ್ಯ ನಡೆಸಿದ್ದಾಳೆ.
ಈ ಬಗ್ಗೆ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೋಂಡಾ ಆಕ್ಟಿವಾದಲ್ಲಿ ಬಂದ ವಿದ್ಯಾ ನಡೆದುಕೊಂಡು ಹೋಗುತ್ತಿದ್ದ ವಿಜಯಕುಮಾರ್ನ ಮೇಲೆ ಆ್ಯಸಿಡ್ ಎರಚಿದ್ದು, ಮಾತ್ರವಲ್ಲದೆ ಚಾಕುವಿನಿಂದ ಮುಖಕ್ಕೆ ಇರಿದಿದ್ದಾಳೆ ನಂತರ ಸ್ಥಳದಲ್ಲಿದ್ದ ಜನರನ್ನು ನೋಡಿ ಪರಾರಿಯಾಗಲು ಯತ್ನಿಸಿದ್ದು, ಸ್ಥಳೀಯರು ಯುವತಿಯನ್ನು ಹಿಡಿದು ವಿಜಯನಗರ ಪೊಲೀಸರಿಗೆ ಒಪ್ಪಿಸಿದ್ದಾರೆ.