ಬೆಂಗಳೂರು: ಖಾಸಗಿ ಕಾಲೇಜುವೊಂದರ ನಾಲ್ವರು ಉಪನ್ಯಾಸಕಿಯರಿಗೆ ‘ಐ ಲವ್ ಯು, ಐ ಮಿಸ್ ಯು, ಫ್ರೀ ಇದ್ದರೆ ಸಿಗುತ್ತೀರಾ…’ ಎಂದು ಅಶ್ಲೀಲ ಮೆಸೇಜ್ ಕಳುಹಿಸಿ ತಲೆ ಮರೆಸಿಕೊಂಡಿದ್ದ ಭದ್ರತಾ ಸಿಬ್ಬಂದಿ ಮಹೇಂದ್ರನನ್ನು ಪೋಲೀಸರು ಬಂಧಿಸಿದ್ದಾರೆ.
ಮಹೇಂದ್ರ ಮಲ್ಲೇಶ್ವರದ ಕಾಲೇಜಿನಲ್ಲಿ ಭದ್ರತಾ ಸಿಬ್ಬಂದಿಯಾಗಿದ್ದು, ಇಂಟರ್ನೆಟ್ ಬಳಸುವುದಾಗಿ ಹೇಳಿ ವಿದ್ಯಾರ್ಥಿಯಿಂದ ಮೊಬೈಲ್ ಪಡೆದುಕೊಂಡಿದ್ದು, ನಾಲ್ವರು ಉಪನ್ಯಾಸಕಿಯರಿಗೆ ಮೊಬೈಲ್ ಮೂಲಕ ಅಶ್ಲೀಲ ಮೆಸೇಜ್ ಕಳುಹಿಸಿದ್ದ. ಈ ಹಿನ್ನೆಲೆ ಮಲ್ಲೇಶ್ವರ ಠಾಣೆಗೆ ಉಪನ್ಯಾಸಕಿಯೊಬ್ಬರು ಜ.13ರಂದು ದೂರು ನೀಡಿದ್ದರು.
ಮೊಬೈಲ್ ಕೊಟ್ಟ ತಪ್ಪಿಗೆ ವಿದ್ಯಾರ್ಥಿಯನ್ನು ಕೂಡ ಪೊಲೀಸರು ಬಂಧಿಸಿದ್ದು, ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ. ಜ.14ರಂದು ಸಿಮ್ ಕಾರ್ಡ್ನ ದಾಖಲೆ ಪರಿಶೀಲಿಸಿ ವಿದ್ಯಾರ್ಥಿಯನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸಿದಾಗ ಮೊಬೈಲನ್ನು ಮಹೇಂದ್ರನಿಗೆ ಕೊಟ್ಟಿರುವುದಾಗಿ ವಿದ್ಯಾರ್ಥಿ ಹೇಳಿದ್ದು, ಹೊಸಕೋಟೆ ವ್ಯಾಪ್ತಿಯ ಟವರ್ನಿಂದ ಆ ಸಿಮ್ ಸಂಪರ್ಕ ಸಿಗುತ್ತಿತ್ತು. ಈ ಸುಳಿವಿನ ಆಧಾರದ ಮೇಲೆ ಭದ್ರತಾ ಸಿಬ್ಬಂದಿ ಮಹೇಂದ್ರನನ್ನು ಬಂಧಿಸಲಾಯಿತು.