ಬೆಂಗಳೂರು: ಕೆಂಗೇರಿಯಲ್ಲಿ ಕಾಮುಕ ತಂದೆ ತನ್ನ 5 ವರ್ಷದ ಮಗಳ ಮೇಲೆ ನಿರಂತರವಾಗಿ ಅತ್ಯಾಚಾರ ನಡೆಸಿದ್ದು, ಕೊನೆಗೂ ಈ ನೀಚನನ್ನು ಪೋಲೀಸರು ಬಂಧಿಸಿದ್ದಾರೆ.
ಅತ್ಯಾಚಾರಿ ಅಪ್ಪ ಮುನ್ನಾ ಎಂದು ಗುರುತಿಸಲಾಗಿದ್ದು, ತಾಯಿ ಮನೆಯಿಂದ ಕೆಲಸಕ್ಕೆ ಹೋದ ಸಂದರ್ಭ ನೋಡಿ, ವಾಪಸ್ ಮನೆಗೆ ಬರುತ್ತಿದ್ದ ಕಾಮುಕ ಅಪ್ಪ ತನ್ನ ಚಿಕ್ಕ ಮಗಳ ಮೇಲೆ ಅತ್ಯಾಚಾರ ನಡೆಸುತ್ತಿದ್ದ.
ಇದೀಗ ನೀಚ ತಂದೆಯ ವಿರುದ್ಧ ಫೋಕ್ಸೋ ಕಾಯ್ದೆಯಡಿ ದೂರು ದಾಖಲಿಸಿಕೊಂಡ, ಕೆಂಗೇರಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.