ಬೆಂಗಳೂರು: ಕೆಲಸ ಕೊಡಿಸುವುದಾಗಿ ನಂಬಿಸಿ ಬೇರೆ ಬೇರೆ ಊರುಗಳಿಂದ 14 ರಿಂದ 17 ವರ್ಷ ವಯೋಮಾನದ ಬಾಲಕಿಯರನ್ನು ಬಳಸಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಮೂವರು ಮಹಿಳೆಯರು ಸೇರಿದಂತೆ ಆರು ಮಂದಿಯನ್ನು ಕಾಡುಗೊಂಡನಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಹೆಣ್ಣು ಮಕ್ಕಳನ್ನು ರಕ್ಷಿಸಿ ಬಾಲ ಮಂದಿರಕ್ಕೆ ಕಳುಹಿಸಲಾಗಿದ್ದು, ಬಂಧಿತರನ್ನು ನದೀಮ್ ಮಹಮ್ಮದ್ (23), ಇಮ್ರಾನ್(22) , ಯಾಸ್ಮಿನ್ (35), ಮುನಿರಾಭಾನು (30), ಮುಬಾರಕ್(23), ಹಾಗೂ ಎಚ್ಬಿಆರ್ ಲೇಔಟ್ನ ಶಖಿಲಾ (40) ಎಂದು ಗುರುತಿಸಲಾಗಿದೆ.
ವೇಶ್ಯಾವಾಟಿಕೆ ದಂಧೆಯಲ್ಲಿ ಬಂದ ಹಣದಲ್ಲಿ ಬಾಲಕಿಯರು ಹಾಗೂ ಅವರ ಪೋಷಕರಿಗೂ ಪಾಲು ಕೊಡುತ್ತಿದ್ದು, ಸುಲಭವಾಗಿ ಹಣ ಸಿಗುತ್ತಿದ್ದ ಕಾರಣ ಅವರೂ ಪೋಷಕರು ಸುಮ್ಮನಿದ್ದರು.
ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಮಂಗಳವಾರ ರಾತ್ರಿ ದಾಳಿ ನಡೆಸಿದಾಗ ಪ್ರಕರಣ ಬಯಲಾಗಿದ್ದು, ಎಚ್ಬಿಆರ್ ಲೇಔಟ್ನ ಮನೆಯೊಂದರಲ್ಲಿ ಕಾನೂನು ಬಾಹಿರ ಚಟುವಟಿಕೆ ನಡೆಯುತ್ತಿರುವ ಬಗ್ಗೆ ಪೊಲೀಸ್ ಮಾಹಿತಿದಾರರು ಸುಳಿವು ನೀಡಿದ್ದರು.