ಬೆಂಗಳೂರು: ಹೆಣ್ಣಿನ ಕಾಲ್ಗುಣ ಸರಿಯಿಲ್ಲವೆಂದು ವಿವಾಹ ನಿಶ್ಚಿತಾರ್ಥ ಬಳಿಕ ಮದುವೆ ಗಂಡು ತಿಳಿಸಿದ್ದು, ಇದರಿಂದ ನೊಂದ ವಧು ನೇಣಿಗೆ ಶರಣಾದ ಘಟನೆ ಮಂಗಳವಾರ ಸಂಜೆ ರಾಜರಾಜೇಶ್ವರಿಯಲ್ಲಿ ನಡೆದಿದೆ.
32 ವರ್ಷದ ನಾಗಲಕ್ಷ್ಮೀ ಎಂಬಾಕೆ ನೇಣಿಗೆ ಶರಣಾಗಿದ್ದು, ಈಕೆಗೆ ಕಳೆದ ವರ್ಷದ ಆರಂಭದಲ್ಲೇ ಕಾರ್ತಿಕ್ ಎನ್ನುವ ಸಾಫ್ಟ್ ವೇರ್ ಇಂಜಿನಿಯರ್ನೊಂದಿಗೆ ವಿವಾಹ ನಿಶ್ಚಿತಾರ್ಥವಾಗಿತ್ತು. ಕೆಲವೇ ದಿನಗಳಲ್ಲಿ ಕಾರ್ತಿಕ್ನ ತಂದೆ ಅಪಘಾತದಲ್ಲಿ ಮೃತಪಟ್ಟಿದ್ದರಿಂದ ಮದುವೆಯನ್ನು ವರ್ಷದ ಕಾಲ ಮುಂದೂಡಲಾಗಿತ್ತು. ಈ ವರ್ಷ ಎರಡೂ ಕಡೆಯವರು ಮಾತುಕತೆ ನಡೆಸಿ ಮೇ 22 ರಂದು ಮಹೂರ್ತ ನಿಗದಿ ಪಡಿಸಿದ್ದರು. 2 ದಿನಗಳ ಹಿಂದೆ ನೀನು ದುರಾದೃಷ್ಟವಂತೆ, ಕಾಲ್ಗುಣ ಸರಿ ಇಲ್ಲ ಎಂದು ಹೇಳಿ ಮದುವೆಗೆ ನಿರಾಕರಿಸಿದ ಯುವಕ ರಿಜಿಸ್ಟರ್ಡ್ ಪೋಸ್ಟ್ನಲ್ಲಿ ಪತ್ರ ಕಳುಹಿಸಿದ್ದು,ಇದರಿಂದ ಯುವತಿ ತೀವ್ರವಾಗಿ ಮನನೊಂದು ನೇಣಿಗೆ ಶರಣಾಗಿದ್ದಾಳೆ.
ಈ ಬಗ್ಗೆ ತೀವ್ರ ನೊಂದಿರುವ ನಾಗಲಕ್ಷ್ಮೀ ಮನೆಯವರು ಕಾರ್ತಿಕ್ ವಿರುದ್ಧ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.