ಬೆಂಗಳೂರು: ಯಡಿಯೂರಪ್ಪ ತಾವು ಮಾಡಿರುವ ಆರೋಪ ಸಾಬೀತು ಮಾಡಿದರೇ ಕೂಡಲೇ ತಾವು ಸಚಿವ ಸ್ಥಾನದಿಂದ ಕೆಳಗಿಳಿಯುವುದಾಗಿ ನಗರಾಭಿವೃದ್ಧಿ ಸಚಿವ ಕೆ.ಜೆ ಜಾರ್ಜ್ ಸವಾಲು ಹಾಕಿದ್ದಾರೆ.
ಕಾಂಗ್ರೆಸ್ ಹೈಕಮಾಂಡ್ ಗೆ ಕಪ್ಪ ಹಾಗೂ ಸ್ಟೀಲ್ ಬ್ರಿಡ್ಜ್ ಯೋಜನೆಗಾಗಿ ಸಿಎಂ ಸಿದ್ದರಾಮಯ್ಯ ಅವರ ಕುಟುಂಬಕ್ಕೆ 65 ಕೋಟಿ ರು ಕಿಕ್ ಬ್ಯಾಕ್ ನೀಡಿರುವ ಆರೋಪ ಮಾಡುತ್ತಿರುವ ಮಾಜಿ ಸಿಎಂ ಯಡಿಯೂರಪ್ಪ ತಮ್ಮ ಅದನ್ನು ಸಾಬೀತು ಪಡಿಸಿದರೇ ರಾಜಕೀಯ ತೊರೆಯುವುದಾಗಿ ಎಂದರು. ಬಿಬಿಎಂಪಿಯ 1,600 ಕೋಟಿ ರು ಹಗರಣವನ್ನು ಬಯಲು ಮಾಡುವುದಾಗಿ ಯಡಿಯೂರಪ್ಪ ಬೆದರಿಕೆ ಹಾಕಿದ್ದಾರೆ, ಅವರು ಅದನ್ನು ಬಿಡುಗಡೆ ಮಾಡಲಿ,ಏನು ಬರುತ್ತದೆ ಎಂಬುದನ್ನು ನಾವು ಕಾದು ನೋಡುತ್ತೇವೆ ಎಂದು ಹೇಳಿದ್ದಾರೆ.