News Kannada
Thursday, December 08 2022

ಬೆಂಗಳೂರು ನಗರ

ಸಿಎಂ ರಿಂದ 2017-18ನೇ ಸಾಲಿನ ರಾಜ್ಯ ಬಜೆಟ್ ಮಂಡನೆ

Photo Credit :

ಸಿಎಂ ರಿಂದ 2017-18ನೇ ಸಾಲಿನ ರಾಜ್ಯ ಬಜೆಟ್ ಮಂಡನೆ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸೌದದಲ್ಲಿ 2017-18ನೇ ಸಾಲಿನ ಆಯವ್ಯಯಪಟ್ಟಿ ಮಂಡಿಸುತ್ತಿದ್ದು, ಇದು ಅವರ 12 ಬಜೆಟ್ ಮಂಡನೆಯಾಗಿದೆ. ಪ್ರಸಕ್ತ ಸಾಲಿನ ಬಜೆಟ್ ಸುಮಾರು 2 ಲಕ್ಷ ಕೋಟಿ ಗಾತ್ರದ್ದಾಗಿದೆ. ಬಜೆಟ್ ಮಂಡನೆಗೂ ಮುನ್ನ ಬಜೆಟ್ ಹೇಗಿರಲಿದೆ ಎಂದು ಸಿಎಂ ಟ್ವೀಟ್ ಮಾಡಿದ್ದಾರೆ. ಸರ್ವರನ್ನೂ ಒಳಗೊಳ್ಳುವ, ನಾಡಿನ ಸರ್ವತೋಮುಖ ಅಭಿವೃದ್ಧಿಗೆ ಕಾರಣವಾಗುವ ಬಜೆಟ್ ಮಂಡನೆಗೆ ಅಣಿಯಾಗುತ್ತಿದ್ದೇನೆ ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.

CM Siddaramaiah to present his 12th budget today-1
ಬಜೆಟ್ ಮುಖ್ಯಾಂಶಗಳು:
* ರಾಜ್ಯ ಹೆದ್ದಾರಿಗಳು, ಕೈಗಾರಿಕಾ ಪಾರ್ಕ್ ಗಳು ನಮ್ಮ ಹೆಮ್ಮೆಯ ಸಾಧನೆ. ರಾಜ್ಯದ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಈಗಾಗಲೇ ಹಲವು ಯೋಜನೆಗಳನ್ನು ತಿದ್ದುಪಡಿ ಮಾಡಲಾಗಿದೆ.
* ಬೆಂಗಳೂರನ್ನು ಅತ್ಯಂತ ಕ್ರಿಯಾಶೀಲ ನಗರಿಯನ್ನಾಗಿಸಿದ್ದೇವೆ. ಸಾಮಾಜಿಕ ನ್ಯಾಯದ ಪರಿಕಲ್ಪನೆಯಡಿ ಬಜೆಟ್ ಮಂಡನೆ.
*12 ಲಕ್ಷ ಮಹಿಳೆಯರಿಗೆ ಮಧ್ಯಾಹ್ನದ ಬಿಸಿಯೂಟದ ಯೋಜನೆ. ಹೊಸ ತಾಲೂಕು ಪಂಚಾಯ್ತಿ ಕಚೇರಿ ನಿರ್ಮಾಣಕ್ಕೆ 300 ಕೋಟಿ ಅನುದಾನ
*21 ಹೊಸ ತಾಲೂಕುಗಳ ಘೋಷಣೆ, ಅನ್ನಭಾಗ್ಯ ಅಕ್ಕಿ 5ಕೆಜಿಯಿಂದ 7ಕೆಜಿಗೆ ಏರಿಕೆ. ಅನ್ನಭಾಗ್ಯದ ಅಕ್ಕಿ ಕುಟಂಬಕ್ಕೆ 35ಕೆಜಿಗೆ ಏರಿಕೆ.
*6 ಹೊಸ ಮೆಡಿಕಲ್ ಕಾಲೇಜು, 5 ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆ. ಅಮ್ಮಾ ಕ್ಯಾಂಟೀನ್ ಮಾದರಿಯಲ್ಲೇ ಬೆಂಗಳೂರಿನಲ್ಲಿ 198 ನಮ್ಮ ಕ್ಯಾಂಟೀನ್.
*5 ರೂಪಾಯಿಗೆ ತಿಂಡಿ, 10 ರೂಪಾಯಿಗೆ ಊಟ..ಇದು ನಮ್ಮ ಕ್ಯಾಂಟೀನ್ ವಿಶೇಷತೆ. ರೈತರ ಸಾಲ ಮನ್ನಾ ಇಲ್ಲ. ಸಾಲ ಮರುಪಾವತಿ ಅವಧಿ ವಿಸ್ತರಣೆ.
*ಪ್ರಸಕ್ತ ಸಾಲಿನ ಬಜೆಟ್ ನಲ್ಲಿ 49 ಹೊಸ ತಾಲೂಕುಗಳ ಘೋಷಣೆ. ಶೂನ್ಯ ಬಡ್ಡಿದರದಲ್ಲಿ 3ಲಕ್ಷದವರೆಗೆ ಸಾಲ ಸೌಲಭ್ಯ ಮುಂದುವರಿಕೆ.
*2017-18ನೇ ಸಾಲಿನಲ್ಲಿ 1,86, 561 ಕೋಟಿ ರೂಪಾಯಿ ಗಾತ್ರದ ಬಜೆಟ್ ಮಂಡನೆ. 25 ಲಕ್ಷ ರೈತರಿಗೆ 13, 500 ಕೋಟಿ ರೂಪಾಯಿ ಕೃಷಿ ಸಾಲ ನೀಡುವ ಗುರಿ.
*ಅಂಗನವಾಡಿ ಮಕ್ಕಳಿಗೆ ವಾರದಲ್ಲಿ 2 ದಿನ ಮೊಟ್ಟೆ. ಕ್ಷೀರಭಾಗ್ಯ ಯೋಜನೆಯಡಿ ವಾರದಲ್ಲಿ 5ದಿನ ಮಕ್ಕಳಿಗೆ ಹಾಲು ವಿತರಣೆ.
*4200 ಕೋಟಿ ರೂಪಾಯಿ ವೆಚ್ಚದಲ್ಲಿ ಮೆಟ್ರೋ 2ನೇ ಹಂತ ಜಾರಿ. 3 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ನೀರಾವರಿ ಯೋಜನೆ.
*ಸರಕು ಸೇವಾ ತೆರಿಗೆ ಜಾರಿ ಹಿನ್ನೆಲೆಯಲ್ಲಿ ತೆರಿಗೆಯಲ್ಲಿ ಯಾವುದೇ ಬದಲಾವಣೆ ಇಲ್ಲ. ಗೋಧಿ ಪದಾರ್ಥಗಳ ಮೇಲಿನ ತೆರಿಗೆ ವಿನಾಯ್ತಿ ಮುಂದುವರಿಕೆ.
*42 ಕೋಟಿ ರೂಪಾಯಿ ವೆಚ್ಚದಲ್ಲಿ 10 ಕೆರೆಗಳ ಅಭಿವೃದ್ಧಿ. ಲೈಂಗಿಕ ದೌರ್ಜನ್ಯಕ್ಕೊಳಗಾದ ಸಂತ್ರಸ್ತೆಯರಿಗಾಗಿ 145 ಚಿಕಿತ್ಸಾ ಘಟಕ ಸ್ಥಾಪನೆ.
*ಒಂದನೇ ತರಗತಿಯಿಂದಲೇ ಇಂಗ್ಲಿಷ್ ಬೋಧನೆ. ಬೆಳೆಗಳ ಮೇಲಿನ ತೆರಿಗೆ ವಿನಾಯ್ತಿ ಮುಂದುವರಿಕೆ. ಭತ್ತ, ಅಕ್ಕಿ, ಗೋಧಿ, ಕಾಳುಗಳ ಮೇಲೆ ತೆರಿಗೆ ವಿನಾಯ್ತಿ.
*ದಾವಣಗೆರೆ, ತುಮಕೂರು, ವಿಜಯಪುರ,ಕೋಲಾರ, ರಾಮನಗರದಲ್ಲಿ ಸೂಪರ್, ಸ್ಪೆಶಾಲಿಟಿ ಆಸ್ಪತ್ರೆ.

*ಉನ್ನತ ಶಿಕ್ಷಣ ಇಲಾಖೆಗೆ ಒಟ್ಟು 4,401 ಕೋಟಿ ರೂಪಾಯಿ ಅನುದಾನ. ಶಾಲಾ ನಿರ್ವಹಣೆ, ಸುಧಾರಣೆಗೆ ಶಿಕ್ಷಣ ಕಿರಣ ಯೋಜನೆ ಜಾರಿ. ಹಂಪಿ ಕನ್ನಡ ವಿವಿಗೆ 25 ಕೋಟಿ ಯೋಜನೆ.
*ರಾಜ್ಯದ ಎಲ್ಲಾ ಗ್ರಾಮ ಪಂಚಾಯ್ತಿಗಳಲ್ಲಿ ವೈಫೈ ಯೋಜನೆ. 30 ಕೋಟಿ ವೆಚ್ಚದಲ್ಲಿ ಮೋಡ ಬಿತ್ತನೆ ಕಾರ್ಯ.
*ರಾಜ್ಯದ 9 ಜಿಲ್ಲೆಗಳಲ್ಲಿ ಕರ್ನಾಟಕ ವನ್ ಕೇಂದ್ರ ಸ್ಥಾಪನೆ. ಅಬಕಾರಿ ಶುಲ್ಕದಲ್ಲಿ ಹೆಚ್ಚಳ. ರಾಜ್ಯದಲ್ಲಿ ನೀರಾ ನೀತಿ ಜಾರಿ. ರಾಜ್ಯ ಅಬಕಾರಿ ಕಾಯ್ದೆಗೆ ತಿದ್ದುಪಡಿ.
*ಕೆರೆ ಸಂಜೀವಿನಿ ಯೋಜನೆ 100 ಕೋಟಿ ರೂಪಾಯಿ. 200 ಕೋಟಿ ರೂಪಾಯಿ ವೆಚ್ಚದಲ್ಲಿ ಶುದ್ಧ ಕುಡಿಯುವ ಯೋಜನೆ. ಬೆಂಗಳೂರು ವನ್ ಮಾದರಿಯಲ್ಲಿ ಕರ್ನಾಟಕ ವನ್.
*ಬಿಯರ್, ಫೆನ್ನಿ, ಲಿಕ್ಕರ್, ವೈನ್ ಮೇಲಿನ ಮೌಲ್ಯವರ್ಧಿತ ತೆರಿಗೆ ರದ್ದು. ಮದ್ಯದ ಮೇಲೆ ಹೆಚ್ಚುವರಿ ಅಬಕಾರಿ ಸುಂಕ.
*ಎಪಿಎಂಪಿಸಿಯಲ್ಲಿ ವೈಜ್ಞಾನಿಕವಾಗಿ ಹಣ್ಣು ಮಾಗಿಸುವ ವ್ಯವಸ್ಥೆಗೆ 10 ಕೋಟಿ ಮೀಸಲು. ಕನ್ನಡ ಚಿತ್ರೋದ್ಯಮ ಅಭಿವೃದ್ಧಿಗೆ ಮೈಸೂರಿನ ಹಿಮ್ಮಾವು ಎಂಬಲ್ಲಿ ಚಿತ್ರನಗರಿ ನಿರ್ಮಾಣ.
*ಶ್ರವಣಬೆಳಗೊಳ ಮಹಾಮಸ್ತಾಕಾಭಿಷೇಕಕ್ಕೆ 175 ಕೋಟಿ, 1 ಲಕ್ಷ ದ್ವಿಚಕ್ರ ವಾಹನಗಳ ಮೇಲಿನ ತೆರಿಗೆ ಶೇ.12ರಿಂದ ಶೇ.18ಕ್ಕೆ ಹೆಚ್ಚಳ. ಮಲ್ಟಿಪ್ಲೆಕ್ಸ್ ಗಳಲ್ಲಿನ ಚಿತ್ರಮಂದಿರದ ಟಿಕೆಟ್ ದರ 200ಕ್ಕೆ ನಿಗದಿ.
*ಖಾಸಗಿ ಸಂಸ್ಥೆಗಳಲ್ಲಿ ಎಸ್ ಸಿ, ಎಸ್ ಟಿ ಕಾರ್ಮಿಕರಿಗೆ ಉದ್ಯೋಗ ಒದಗಿಸಲು ಆಶಾದೀಪ ಯೋಜನೆ. ವಾಣಿಜ್ಯೋದ್ಯಮಿಗಳಿಗೆ ಬಿಗ್ ರಿಲೀಫ್ ನೀಡಿದ ಸಿಎಂ.
*ತುಂತುರು ನೀರಾವರಿ ಯೋಜನೆಗೆ 375 ಕೋಟಿ ಅನುದಾನ. ಕೃಷಿ ಇಲಾಖೆಗೆ 5080 ಕೋಟಿ ರೂಪಾಯಿ ಅನುದಾನ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸವಿರುಚಿ ಸಂಚಾರಿ ಕ್ಯಾಂಟೀನ್.

See also  ಇನ್ಮುಂದೆ ಎಲ್ಲ ಕೆಎಸ್ಆರ್ ಟಿಸಿ ಬಸ್ ನಿಲ್ದಾಣಗಳಲ್ಲಿ ಇಂದಿರಾ ಕ್ಯಾಂಟೀನ್: ಹೆಚ್.ಎಂ.ರೇವಣ್ಣ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು