ಬೆಂಗಳೂರು: ವಿಧಾನ ಪರಿಷತ್ತಿನಲ್ಲಿ ಎಲ್ಲ ಪಕ್ಷಗಳ ಸದಸ್ಯರು ಜಾತಿಗೊಂದು ಸ್ಮಶಾನ ನಿರ್ಮಿಸದೆ ಒಂದೇ ಕಡೆ ಶವ ಸಂಸ್ಕಾರ ಮಾಡುವ ವ್ಯವಸ್ಥೆ ತರಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ರುದ್ರಭೂಮಿಗಾಗಿ ವಿವಿಧ ಸಮುದಾಯಗಳಿಗೆ ಸರ್ಕಾರಿ ಜಾಗ ಮಂಜೂರು ಮಾಡುವ ಬಗ್ಗೆ ಕಾಂಗ್ರೆಸ್ ಸದಸ್ಯ ಎಂ.ಡಿ. ಲಕ್ಷ್ಮೀನಾರಾಯಣ ಅವರ ಪ್ರಶ್ನೆಯ ಮೇಲೆ ಚರ್ಚೆ ನಡೆಸಲಾಯಿತು.
ರಾಮಚಂದ್ರಗೌಡ ಅವರು ‘ಜಾತಿಗೆ ಒಂದು, ಉಪಜಾತಿಗೆ ಒಂದು ಸ್ಮಶಾನ ಮಾಡಬಾರದು. ಎಲ್ಲರಿಗೂ ಒಂದೇ ಸ್ಮಶಾನ ಇರಬೇಕು’ ಎಂದು ಹೇಳಿದರೆ, ‘ಜಾತಿ ಮೀರಿದಂತಹ ಸ್ಮಶಾನಗಳು ಇರಬೇಕು. ಈ ಬಗ್ಗೆ ಸರ್ಕಾರ ನೀತಿ ರೂಪಿಸಬೇಕು ಎಂದು ವಿ.ಎಸ್.ಉಗ್ರಪ್ಪ ಒತ್ತಾಯಿಸಿದರು.